ಜಮ್ಮುವಿನಲ್ಲಿ ಪಾಕ್ ದಾಳಿಗೆ ಇಬ್ಬರು ಯೋಧರು ಬಲಿ

ಶ್ರೀನಗರ, ನ.6: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿದ್ದು, ಭಾರತದ ಇಬ್ಬರು ಯೋಧರು ಬಲಿಯಾಗಿದ್ದಾರೆ.
ಪಾಕಿಸ್ತಾನದ ಸೇನೆ ಭಾರತದ ನಾಗರಿಕರು ಮತ್ತು ಬಿಎಸ್‌ಎಫ್ ನ ಐದು ಪೋಸ್ಟ್ ಗಳನ್ನು ಗುರಿಯಾಗರಿಸಿ ದಾಳಿ ನಡೆಸುತ್ತಿದ್ದು, ಭಾರತದ ಯೋಧರು ಪ್ರತಿಯಾಗಿ ನಡೆಸುತ್ತಿದ್ದಾರೆ. ಗುಂಡಿನ ಚಕಮಕಿ ಮುಂದುವರಿದಿದೆ.
ಪಾಕ್ ಸೈನಿಕರು ಗಡಿನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸುತ್ತಿದ್ದಾರೆ.
Next Story





