'ಅಫ್ಘಾನ್ ಮೊನಲಿಸಾ'ರನ್ನು ಗಡಿಪಾರು ಮಾಡುವುದಿಲ್ಲ: ಪಾಕಿಸ್ತಾನ

ಇಸ್ಲಾಮಾಬಾದ್,ನವೆಂಬರ್ 6: ಅಘ್ಘಾನ್ ಮೊನಲಿಸಾ ಶರ್ಬತ್‌ಗುಲಾರನ್ನು ಗಡಿಪಾರು ಮಾಡಲಾಗದು ಎಂದು ಪಾಕಿಸ್ತಾನ ಹೇಳಿದೆಯೆಂದು ವರದಿಯಾಗಿದೆ. ನಕಲಿ ಗುರುತು ಚೀಟಿ ಹೊಂದಿರುವುದಕ್ಕಾಗಿ ಬಂಧಿಸಲಾಗಿದ್ದ ಶರ್ಬತ್ ಗುಲಾರನ್ನು ಪಾಕಿಸ್ತಾನದಿಂದ ಗಡಿಪಾರುಗೊಳಿಸಬೇಕೆಂದು ಕಳೆದ ದಿವಸ ಪೇಶಾವರದ ಕೋರ್ಟೊಂದು ಆದೇಶಿಸಿತ್ತು.
ಮಾನವೀಯ ಪರಿಗಣನೆಯಡಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರ್ಬತ್‌ಗುಲಾರನ್ನು ಗಡಿಪಾರುಮಾಡಬಾರದೆಂದು ತೆಹ್ರೀಕೆ ಇನ್ಸಾಫ್ ಪಾರ್ಟಿಯ ಅಧ್ಯಕ್ಷ ಇಮ್ರಾನ್‌ಖಾನ್ ಆಗ್ರಹಿಸಿದ್ದರು.
ಅಕ್ಟೋಬರ್ 26ರಂದು ನಕಲಿ ಗುರುತುಚೀಟಿ ಮೂಲಕ ಅನಧಿಕೃತವಾಗಿ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಶರ್ಬತ್ ಗುಲಾರನ್ನು ಪೇಶಾವರದ ಮನೆಯಿಂದ ಫೆಡರಲ್ ಇನ್‌ವೆಸ್ಟಿಗೇಟಿವ್ ಏಜೆನ್ಸಿ ಬಂಧಿಸಿತ್ತು. ಶರ್ಬತ್ ಗುಲಾ ಕೋರ್ಟಿನಲ್ಲಿ ತಪ್ಪೊಪ್ಪಿಕೊಂಡಿದ್ದರು.
ವಿಧವೆಯಾಗಿರುವ ಶರ್ಬತ್‌ಗುಲಾ ರೋಗಿಕೂಡಾ ಆಗಿದ್ದಾರೆ. ಜೊತೆಗೆ ಕುಟುಂಬಕ್ಕೆ ಅವರೇ ಆಶ್ರಯದಾತರಾಗಿದ್ದಾರೆ ಎಂದು ಶರ್ಬತ್‌ಗುಲಾರ ವಕೀಲರು ಕೋರ್ಟಿಗೆ ತಿಳಿಸಿದ್ದರು. ಈಗ ಶರ್ಬತ್ ರಿಮಾಂಡ್‌ನಲ್ಲಿದ್ದು ರಿಮಾಂಡ್ ಅವಧಿ ಬುಧವಾರ ಪೂರ್ತಿಯಾಗಲಿದೆ ಎಂದು ವರದಿ ತಿಳಿಸಿದೆ.







