ಮಾಜಿ ರಾಷ್ಟ್ರಪತಿ ಕಲಾಂರ ಹಿರಿಯಣ್ಣನಿಗೆ 100 ವರ್ಷ ಪೂರ್ತಿ

ರಾಮೇಶ್ವರಂ,ನವೆಂಬರ್ 6: ಮಾಜಿರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರ ಹಿರಿಯ ಸಹೋದರ ಎಪಿಜೆ ಮುಹಮ್ಮದ್ ಮುತ್ತು ಮೀರಾನ್ ಮರಕ್ಕಾರ್‌ರಿಗೆ 100 ವರ್ಷ ವಯಸ್ಸು ಪೂರ್ತಿಯಾಗಿದೆ. ಕುಟುಂಬದ ಮನೆಯಿರುವ ರಾಮೇಶ್ವರಂನಲ್ಲಿ ನಡೆದ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಲಾಂರ ಸಹೋದ್ಯೋಗಿಗಳಾದ ವಿಜ್ಞಾನಿಗಳು, ರಾಜಕೀಯ ನಾಯಕರು ಮತ್ತು ವಿಶಿಷ್ಟ ವ್ಯಕ್ತಿಗಳು ಸಹಿತ ಹಲವಾರು ಮಂದಿ ಭಾಗವಹಿಸಿದ್ದರು. ವಿಜ್ಞಾನಿ ರಾಜನ್, ತಮಿಳ್ ಮಾನಿಲ ಕಾಂಗ್ರೆಸ್ ನಾಯಕ ಜಿ.ಕೆ. ವಾಸನ್, ಉದ್ಯಮಿ ವಿಜಿಪಿ ಸಂತೋಷಂ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರೆಂದು ವರದಿ ತಿಳಿಸಿದೆ.
Next Story





