ಗಲ್ಫ್ ನ ಈ ದೇಶದಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ!

ಮಸ್ಕತ್, ನವೆಂಬರ್ 6: ಒಮನ್‌ನಲ್ಲಿ ಸ್ವದೇಶೀಯರ ನಡುವೆಯೇ ಎಚ್‌ಐವಿ/ಏಡ್ಸ್ ಪೀಡಿತರಸಂಖ್ಯೆಯಲ್ಲಿ ಕಳೆದವರ್ಷ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಆರೋಗ್ಯ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ ರೋಗಪೀಡಿತ ಸ್ವದೇಶಿಗಳ ಸಂಖ್ಯೆಯಲ್ಲಿ ಶೇ.26.7ರಷ್ಟು ಹೆಚ್ಚಳಸಂಭವಿಸಿದೆ.
ಒಟ್ಟು 142 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಇವರಲ್ಲಿ 95 ಮಂದಿ ಪುರುಷರು ಮತ್ತು 47 ಮಂದಿ ಮಹಿಳೆಯರಿದ್ದಾರೆ. ಪುರುಷರು ಮತ್ತು ಮಹಿಳೆಯರಲ್ಲಿ ಹೆಚ್ಚಿನವರು 25 ಮತ್ತು 49 ವರ್ಷಗಳ ನಡುವಿನ ವಯೋಮಾನದವರಾಗಿದ್ದಾರೆ. 2015 ಇಸವಿ ಕೊನೆಯಾದಾಗಿನ ಲೆಕ್ಕಪ್ರಕಾರ ಇವರಲ್ಲಿ 130 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಮೃತರಾಗಿದ್ದಾರೆ. ರೋಗಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಗಂಭೀರವಿಷಯವಾಗಿದೆ ಎಂದು ಆರೋಗ್ಯಸಚಿವಾಲಯದ ಪ್ರತಿನಿಧಿ ಡಾ.ಮುಹಮ್ಮದ್ ಬಾಖಿ ಹೇಳಿದ್ದಾರೆ. ರೋಗ ತಗಲಿದೆಯೇ ಎಂದು ಪರೀಕ್ಷೆ ನಡೆಸಲು ಮುಂದೆ ಬರುವವರ ಸಂಖ್ಯೆ ಈಗ ಹೆಚ್ಚಾಗಿದೆ. ಜಾಗೃತಿ ನಡೆಸಿರುವುದು ಮತ್ತು ಹೆಸರು ಮತ್ತು ವಿವರಗಳನ್ನುರಹಸ್ಯವಾಗಿರಿಸಲಾಗುವುದು ಎಂದು ಹೇಳಿರುವುದು ಕೂಡಾ ಜನರು ರೋಗಪರೀಕ್ಷೆ ನಡೆಸಲಿಕ್ಕಾಗಿ ಮುಂದೆ ಬರಲು ಪ್ರೇರಣೆಯೊದಗಿಸಿದೆ ಎಂದು ಬಾಖಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.





