ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೂ ರಾಜಕೀಯ ತಂದ ಕೇಂದ್ರ ಸರಕಾರ!

ಹೊಸದಿಲ್ಲಿ, ನವೆಂಬರ್ 6: ದೇಶದಲ್ಲಿ ಇದೇ ಪ್ರಥಮವಾಗಿಮಾನವಹಕ್ಕು ಆಯೋಗಕ್ಕೆ ರಾಜಕೀಯ ಹಿನ್ನೆಲೆಯವರನ್ನು ನೇಮಕಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ. ಆಯೋಗದಲ್ಲಿ ಎರಡು ವರ್ಷಗಳಿಂದ ಖಾಲಿಯಿರುವ ಹುದ್ದೆಗಳಿಗೆ ಸಕ್ರಿಯ ರಾಜಕಾರಣಿಗಳನ್ನು ನೇಮಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಇದಕ್ಕೆ ಅಗತ್ಯವಾದ ಕ್ರಮಗಳು ಅಂತಿಮ ಹಂತದಲ್ಲಿದೆ ಎಂದು ಪ್ರಮುಖ ರಾಷ್ಟ್ರೀಯ ಮಾಧ್ಯಮಗಳ ವರದಿಗಳು ಬೆಟ್ಟು ಮಾಡುತ್ತಿವೆ.
ಬಿಜೆಪಿ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನ ಆಯೋಗಕ್ಕೆ ನಾಮನಿರ್ದೇಶನಗೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಧಾನಿ,ಲೋಕಸಭಾಸ್ಪೀಕರ್, ಕೇಂದ್ರ ಗೃಹಸಚಿವ, ಲೋಕಸಭೆ,ರಾಜ್ಯಸಭೆ ಪ್ರತಿಪಕ್ಷನಾಯಕರು, ರಾಜ್ಯಸಭಾ ಉಪಾಧ್ಯಕ್ಷರ ಸಮಿತಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಸದಸ್ಯರನ್ನುಆಯ್ಕೆಮಾಡುತ್ತಾರೆ. ಕಳೆದ ದಿವಸ ಸೇರಿದ ಸಮಿತಿಯ ಸಭೆಯಲ್ಲಿ ಹಲವಾರು ಹೆಸರುಗಳು ಚರ್ಚೆಗೆ ಬಂದರೂ ಅವಿನಾಶ್‌ರ ಹೆಸರು ಅಂತಿಮ ಗೊಂಡಿದೆ ಎನ್ನಲಾಗಿದೆ. ಮಾಜಿಪಂಜಾಬ್ ಮಾನವಹಕ್ಕುಆಯೋಗ ಸದಸ್ಯನಾಗಿ ಅವಿನಾಷ್ ಖನ್ನಾ ಕೆಲಸ ಮಾಡಿದ ಅನುಭವವನ್ನುಕೂಡಾ ಹೊಂದಿದ್ದಾರೆ. ಈ ಹಿಂದೆ ರಾಷ್ಟ್ರೀಯ ಮಾನವಹಕ್ಕು ಆಯೋಗದಲ್ಲಿ ರಾಜಕೀಯ ಹಿನ್ನೆಲೆಯವರನ್ನು ನೇಮಕಗೊಳಿಸುವುದನ್ನು ಮನಮೋಹನ್ ಸಿಂಗ್ ಸರಕಾರ ದ ಅವಧಿಯಲ್ಲಿ ಬಿಜೆಪಿ ವಿರೋಧಿಸಿತ್ತು. ಸುಪ್ರೀಂಕೋರ್ಟು ಜಡ್ಜ್ ಜೋಸೆಫ್ ಸಿರಿಯಕ್‌ರನ್ನು ಆಯೋಗದ ಸದಸ್ಯ ಮಾಡದಂತೆ ಅದು ವಿರೋಧಿಸಿತ್ತು.ಆದರೆ ಅದು ತಿರಸ್ಕೃತಗೊಂಡು ಅವರು ಸದಸ್ಯರಾಗಿ ನೇಮಕವಾಗಿದ್ದರು ಎಂದು ವರದಿ ತಿಳಿಸಿದೆ.





