ಸಚಿವ ಡಿಕೆಶಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಆಸ್ಟ್ರಿಯಾಗೆ ಭೇಟಿ
.jpg)
ಬೆಂಗಳೂರು, ನ.6: ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಎಲ್ ಅಧಿಕಾರಿಗಳ ತಂಡ ಆಸ್ಟ್ರಿಯಾಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ಅಧ್ಯಯನ ನಡೆಸಿತು.
ಆಸ್ಟ್ರಿಯಾದ ಸ್ಟೇರ್ ನಲ್ಲಿರುವ ರಬ್ಬರ್ ಡ್ಯಾಂ ರಚನೆಯಲ್ಲಿ ನಿಷ್ಣಾತರೆನಿಸಿಕೊಂಡ ಹೈಡ್ರೋ ಕನ್ಸ್ ಟ್ರಕ್ಟ್ ಸಂಸ್ಥೆಯ ಕಚೇರಿಗೆ ತಂಡ ಭೇಟಿ ನೀಡಿತು.
ಬಳಿಕ ಸೆಟ್ರರ್ ಹಾಗೂ ಸ್ಚಲಾವು ಎಂಬಲ್ಲಿ ಸಂಸ್ಥೆ ನಿರ್ಮಿಸಿರುವ ರಬ್ಬರ್ ಡ್ಯಾಂ ಆಧಾರಿತ 300 ಹಾಗೂ 1200 ಕೆ.ವಿ. ಸಾಮರ್ಥ್ಯದ ಎರಡು ರಬ್ಬರ್ ಡ್ಯಾಂ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
Next Story





