ಎಸಿಬಿ ಬಲೆಗೆ ಬಿದ್ದಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿ ಆತ್ಮಹತ್ಯೆ

ಬೆಂಗಳೂರು, ನ.6: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ ಕಾರ್ಮಿಕ ಇಲಾಖೆಯ ಇನ್ಸ್‌ಪೆಕ್ಟರ್ ಬಸಯ್ಯ ಅಂಗಡಿ(56) ಕೊಪ್ಪಳ ಹೊರವಲಯದಲ್ಲಿ ಇಂದು ಸಂಜೆ ರೈಲಿಗೆ ತಲೆೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಂತ್ಯಕ್ರಿಯೆ ಸಹಾಯಧನಕ್ಕಾಗಿ ಲಂಚ ಕೇಳಿದ ಆರೋಪ ಹೊತ್ತಿದ್ದ ಬಸಯ್ಯ ಅಂಗಡಿ ಅ.20ರಂದು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು.
ಬಿಡ್ಡಕೇರಿ ನಿವಾಸಿ ಅಮ್ಮೆಜಾನ್ ಅವರಿಂದ ಲಂಚ ಪಡೆಯುತ್ತಿದ್ದಾಗ ಬಸಯ್ಯ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.
Next Story





