ಲದಾಖ್: ಚೀನಿ ಪಡೆಯ ವಿರೋಧ ಲೆಕ್ಕಿಸದೆ ಪೈಪ್‌ಲೈನ್ ಕೆಲಸ ಪೂರ್ಣ

ಲೆಹ್, ನ.6: ಈ ವಾರಾರಂಭದಲ್ಲಿ ಲಡಾಕ್‌ನ ಡೆಮ್ಚೋಕ್‌ನಲ್ಲಿ ಭಾರತೀಯ ಪಡೆಗಳೊಂದಿಗೆ ಮುನಿಸಿಗೆ ಕಾರಣವಾದ ಚೀನದ ಗಡಿ ರಕ್ಷಕರ ಧರಣಿಯಿಂದ ಹಿಂಜರಿಯದ ಸೇನಾ ಇಂಜಿನಿಯರ್‌ಗಳು, ಲಡಾಕ್ ವಲಯದಲ್ಲಿ ಸ್ಥಳೀಯ ಗ್ರಾಮಗಳಿಗೆ ನೀರಾವರಿಯ ಉದ್ದೇಶಕ್ಕಾಗಿ ಪೈಪ್‌ಲೈನ್ ಹಾಕುವ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
ಚೀನದ ಪಿಎಲ್ ಪಡೆಗಳು ವಾಸ್ತವ ನಿಯಂತ್ರಣ ರೇಖೆಯ ಬಳಿಯ ಪ್ರದೇಶಕ್ಕೆ ಪ್ರವೇಶಿಸಿ, ನಿರ್ಮಾಣ ಕಾಮಗಾರಿಯನ್ನು ತಡೆದಿದ್ದವು. ವಾಸ್ತವ ನಿಯಂತ್ರಣ ರೇಖೆಯಿಂದ ಭಾವಿಸಲಾಗಿರುವ ಪ್ರದೇಶದಲ್ಲಿ ಸನ್ನದ್ಧವಾದ ಚೀನಿ ಪಡೆಗಳು, ಅಂತಹ ಚಟುವಟಿಕೆ ನಡೆಸಲು ಪೂರ್ವಾನುಮತಿ ಪಡೆಯುವುದು ಅಗತ್ಯವೆಂದು ಪ್ರತಿಪಾದಿಸಿ ಕೆಲಸ ನಿಲ್ಲಿಸುವಂತೆ ಆಗ್ರಹಿಸಿದ್ದವು.
ಆದರೆ, ಕೇವಲ ರಕ್ಷಣಾ ಸಂಬಂಧಿ ಕೆಲಸಗಳಷ್ಟೇ ಈ ಒಪ್ಪಂದ ಅನ್ವಯಿಸುತ್ತದೆಯೆಂದ ಭಾರತೀಯ ಯೋಧರು ಚೀನಿಯರಿಗೆ ಸಡ್ಡು ಹೊಡೆದಿದ್ದರು.
ಉಭಯ ಪಡೆಗಳ ಜಟಾಪಟಿ ಶನಿವಾರ ಮುಕ್ತಾಯಗೊಂಡಿತ್ತು. ಭೂಸೆನಾ ಇಂಜಿನಿಯರ್‌ಗಳು ಪಿಎಲ್‌ಎಯ ಎಚ್ಚರಿಕೆಯನ್ನು ಲೆಕ್ಕಿಸದೆ, ಸುಮಾರು ಒಂದು ಕಿ.ಮೀ. ಉದ್ದದ ನೀರಾವರಿ ಪೈಪ್‌ಲೈನನ್ನು ಹಾಕಿಯೇ ಬಿಟ್ಟರೆಂದು ಮೂಲಗಳು ತಿಳಿಸಿವೆ.





