ಕ್ರೀಡೆಯಿಂದ ಸಾಮರಸ್ಯ ಸಾಧ್ಯ: ಐವನ್ ಡಿಸೋಜ
ಕಾವೂರು, ನ.6: ಕ್ರೀಡೆಗಳು ಯಾವುದೇ ಭೇದಭಾವವಿಲ್ಲದೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯುಳ್ಳ ಸಾಮರಸ್ಯ ಕೇಂದ್ರಗಳಾಗಿವೆ. ಇವುಗಳ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸಗಳಾಗಬೇಕಿದೆ ಎಂದು ರಾಜ್ಯ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಕಾವೂರು ವಲಯ ಯುವ ಕಾಂಗ್ರೆಸ್ ವತಿಯಿಂದ ಕಾವೂರು ಶಾಂತಿನಗರ ಮೈದಾನದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಬಡ್ಡಿಗೆ ಇಂದು ಜಗತ್ತು ಹೆಚ್ಚು ಒತ್ತು ನೀಡುತ್ತಿದೆ. ಇದನ್ನು ಯುವ ಸಮುದಾಯ ಉದ್ಯೋಗದ ಅವಕಾಶವಾಗಿ ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕ್ರೀಡೆಯನ್ನು ಆಸ್ವಾದಿಸುವುದರ ಜೊತೆಗೆ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಬೇಕಾಗಿದೆ ಎಂದರು.
ಮಂಗಳೂರು ಮನಪಾ ಮೇಯರ್ ಹರಿನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಪಾಲಿಕೆ ಸದಸ್ಯರಾದ ಮುಹಮ್ಮದ್, ನಾಗವೇಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮುಖಂಡರಾದ ಹುಸೈನ್ ಕಾಟಿಪಳ್ಳ, ಮುಹಮ್ಮದ್ ಅಲಿ, ಸುಮಂತ್, ಸದಾಶಿವ ಸುವರ್ಣ, ಯುವ ಕಾಂಗ್ರೆಸ್ ಮುಖಂಡರಾದ ಉತ್ತಮ್ ಆಳ್ವ, ಆಶಿತ್ ಪಿರೇರಾ, ರಮಾನಂದ ಪೂಜಾರಿ, ಶಿಾಲ್ ರಾಜ್, ಹಬೀಬ್, ಜೈಸನ್, ಶಾಂತಿನಗರ ರಾಮ ಭಜನಾ ಮಂದಿರದ ಅಧ್ಯಕ್ಷ ಧರ್ಮಪ್ಪ ಸಾಲ್ಯಾನ್, ಶಾಂತಿನಗರ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.
ಕಾವೂರು ಯೂತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಹಮ್ಮದ್ ನೌಫಲ್ ಸ್ವಾಗತಿಸಿದರು.





