Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಿಂಸಾಗ್ರಸ್ತ ಕಣ್ಣೂರಿನಲ್ಲಿ ಗುಡಿ...

ಹಿಂಸಾಗ್ರಸ್ತ ಕಣ್ಣೂರಿನಲ್ಲಿ ಗುಡಿ ಕೈಗಾರಿಕೆಯಾಗಿರುವ ಬಾಂಬ್ ತಯಾರಿಕೆ

ವಾರ್ತಾಭಾರತಿವಾರ್ತಾಭಾರತಿ6 Nov 2016 11:56 PM IST
share
ಹಿಂಸಾಗ್ರಸ್ತ ಕಣ್ಣೂರಿನಲ್ಲಿ ಗುಡಿ ಕೈಗಾರಿಕೆಯಾಗಿರುವ ಬಾಂಬ್ ತಯಾರಿಕೆ

ಕಣ್ಣೂರು,ನ.6: ಎಡರಂಗ ಮತ್ತು ಸಂಘಪರಿವಾರ ಬೆಂಬಲಿಗರ ನಡುವೆ ಘರ್ಷಣೆಗಳಿಂದಾಗಿ ಕುಖ್ಯಾತವಾಗಿರುವ ಕೇರಳದ ಕಣ್ಣೂರು ಜಿಲ್ಲೆಯ ರಾಜಕೀಯವಾಗಿ ಕಾವೇರಿಸಿ ಕೊಂಡಿರುವ ಗ್ರಾಮಗಳಲ್ಲಿ ಬಾಂಬ್ ತಯಾರಿಕೆ ಎನ್ನುವುದು ಗುಡಿ ಕೈಗಾರಿಕೆಯಂತಾಗಿಬಿಟ್ಟಿದೆ. ಸ್ಥಳೀಯ ಪೊಲೀಸರೇ ಇಲ್ಲಿಯ ಕೆಲವು ಗ್ರಾಮಗಳನ್ನು ಪ್ರವೇಶಿಸಲು ಹೆದರುತ್ತಾರೆ. ದಾಳಿಗೆ ಬರುವ ಪೊಲೀಸ್ ತಂಡಗಳ ಮೇಲೆಯೇ ದಾಳಿಗಳು ಇಲ್ಲಿ ಸಾಮಾನ್ಯವಾಗಿವೆ. ಇದೊಂದೇ ವರ್ಷದಲ್ಲಿ ಕಣ್ಣೂರು ಏಳು ರಾಜಕೀಯ ಹತ್ಯೆಗಳಿಗೆ ಮತ್ತು 200ಕ್ಕೂ ಅಧಿಕ ಹಿಂಸಾತ್ಮಕ ಘರ್ಷಣೆಗಳಿಗೆ ಸಾಕ್ಷಿಯಾಗಿದೆ. ಅಂದ ಹಾಗೆ ಕಣ್ಣೂರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆಯೂ ಹೌದು.

ನಾಡಬಾಂಬ್‌ಗಳ ತಯಾರಿಕೆ ವೇಳೆ ವಿಲಕ್ಷಣ ಅವಘಡಗಳು ಇಲ್ಲಿ ಮಾಮೂಲು ಘಟನೆಗಳಾಗಿವೆ. ನಾಲ್ಕು ತಿಂಗಳ ಹಿಂದೆ ಕೂತುಪರಂಬದಲ್ಲಿ ಬಾಂಬ್ ತಯಾರಿಕೆ ಸಂದರ್ಭ ಅದು ಆಕಸ್ಮಿಕವಾಗಿ ಸ್ಫೋಟಗೊಂಡು ಆರೆಸ್ಸೆಸ್ ಕಾರ್ಯಕರ್ತ ದೀಷಿತ್(23) ಎಂಬಾತನ ದೇಹ ಛಿದ್ರವಿಚ್ಛಿದ್ರಗೊಂಡು ಮಾಂಸದ ತುಂಡುಗಳನ್ನು ಬುಟ್ಟಿಯಲ್ಲಿ ತುಂಬುವಂತಾಗಿತ್ತು. ಕಳೆದ ವರ್ಷ ಪಾನೂರು ಸಮೀಪ ಸ್ಫೋಟಕಗಳನ್ನು ತಯಾರಿಸುತ್ತಿದ್ದಾಗ ಸ್ಫೋಟ ಸಂಭವಿಸಿ ಇಬ್ಬರು ಸಿಪಿಎಂ ಕಾರ್ಯಕರ್ತರು ಜೀವಕ್ಕೆರವಾಗಿದ್ದರು.

ಸಾಮಾನ್ಯವಾಗಿ ಇಂತಹ ಆಕಸ್ಮಿಕಗಳು ಸಂಭವಿಸಿದಾಗ ಸ್ಥಳೀಯ ನಾಯಕರು ಘಟನಾ ಸ್ಥಳಕ್ಕೆ ಧಾವಿಸಿ ಸಾಕ್ಷಾಧಾರಗಳನ್ನು ನಾಶ ಮಾಡಿಬಿಡುತ್ತಾರೆ. ಹೀಗಾಗಿ ತನಿಖೆ ನಡೆಸುವವರಿಗೆ ಯಾವುದೇ ಸುಳಿವುಗಳೇ ದೊರೆಯುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.

ಈ ವರ್ಷ ಬಾಂಬ್‌ಗಳನ್ನು ತಯಾರಿಸುವಾಗ ಕನಿಷ್ಠ 18 ಜನರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು,ಸುಮಾರು 60 ಕಚ್ಚಾ ಬಾಂಬ್‌ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಅಂಕಿಅಂಶಗಳು ನಿಜಕ್ಕೂ ಗಾಬರಿಯನ್ನು ಹುಟ್ಟಿಸುತ್ತವೆ. ಆದರೆ ಈ ಅಂಕಿಅಂಶಗಳನ್ನೇ ತಿರಸ್ಕರಿಸುವ ಆರೆಸೆಸ್ ಮತ್ತು ಸಿಪಿಎಂ ಎಲ್ಲೋ ಒಂದೆರಡು ಇಂತಹ ಪ್ರಕರಣಗಳು ನಡೆದಿವೆ ಎಂದು ಹೇಳಿಕೊಂಡಿವೆ.

ಕಣ್ಣೂರಿನ ಒಳನಾಡು ಪ್ರದೇಶಗಳಲ್ಲಿ ಒಮ್ಮೆ ಸುತ್ತಾಡಿದರೆ ಕಚ್ಚಾ ಬಾಂಬ್‌ತಯಾರಿಕೆ ಸಂದರ್ ಅಂಗಾಂಗಗಳನ್ನು ಕಳೆದುಕೊಂಡವರು ಹೇರಳವಾಗಿ ಕಣ್ಣಿಗೆ ಬೀಳುತ್ತಾರೆ. ಅಂಗೈಯನ್ನು ಕಳೆದುಕೊಂಡಿರುವ ವ್ಯಕ್ತಿ,ಕಾಲು ಕತ್ತರಿಸಲ್ಪಟ್ಟಿರುವ ಯುವಕ,ಮೈತುಂಬ ಆಳವಾದ ಗಾಯಗಳ ಗುರುತುಗಳನ್ನು ಹೊತ್ತಿರುವಾತ ಇವರೆಲ್ಲ ಕೆಲವು ಉದಾಹರಣೆಗಳು ಮಾತ್ರ. ಇಂತಹ ನತದೃಷ್ಟರು ಕಣ್ಣೂರಿನ ಗ್ರಾಮಗಳಲ್ಲಿ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ. ಕೆಲವರು ರಾಜಕೀಯ ಘರ್ಷಣೆಗಳ ಬಲಿಪಶುಗಳಾಗಿದ್ದರೆ,ಇನ್ನು ಕೆಲವರು ಪ್ರಾದೇಶಿಕ ನಿಯಂತ್ರಣಕ್ಕಾಗಿ ನಡೆದ ಹೊಡೆದಾಟದಲ್ಲಿ ಆಗಿರುವ ಗಾಯಗಳ ಗುರುತುಗಳನ್ನು ತೋರಿಸುತ್ತಾರೆ. ಘರ್ಷಣೆಗಳಲ್ಲಿ ಸತ್ತು ಹೋದವರು ನಿಜಕ್ಕೂ ಪುಣ್ಯವಂತರು ಎನ್ನುತ್ತಾರೆ ಅಂಗಾಂಗಗಳನ್ನು ಕಳೆದುಕೊಂಡು ಜೀವಚ್ಛವಗಳಂತೆ ಬದುಕುಳಿದಿರುವ ಇಲ್ಲಿಯವರು.

 ಆರೆಸ್ಸೆಸ್ ಅಥವಾ ಸಿಪಿಎಂಗೆ ನಿಷ್ಠವಾಗಿರುವ ‘ಪಕ್ಷ ಗ್ರಾಮಗಳು ’ ಆಯ್ದ ಕಾರ್ಯಕರ್ತರನ್ನು ಹೊಂದಿದ್ದು ಅವರಿಗೆ ಉಕ್ಕು,ಪೆಟ್ರೋಲ್‌ನಿಂದ ಹಿಡಿದು ಆ್ಯಸಿಡ್‌ವರೆಗೆ ವಿವಿಧ ವಸ್ತುಗಳನ್ನು ಬಳಸಿ ಬಾಂಬ್ ತಯಾರಿಕೆ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿರುತ್ತದೆ.

ಇಲ್ಲಿ ತಯಾರಾಗುವ ಸ್ಫೋಟಕಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಬಚ್ಚಿಡಲಾಗುತ್ತದೆ. ಇವುಗಳನ್ನು ಹೊರತೆಗೆಯುವಾಗ ಸ್ಫೋಟಗೊಂಡು ಗಾಯಗಳಾಗುವುದೂ ಇದೆ.

ಕಚ್ಚಾ ಬಾಂಬ್‌ಗಳು ಸುಲಭದಲ್ಲಿ ಪತ್ತೆಯಾಗದಂತೆ ಅವುಗಳನ್ನು ಗೋರಿಗಳಲ್ಲಿ ಅಡಗಿಸಿಡುವುದೂ ಇದೆ. ಇತ್ತೀಚಿಗೆ ಪಾನೂರಿನ ಪಾಳುಬಾವಿಯೊಂದರಿಂದ ಒಂದು ಡಝನ್ ಸ್ಟೀಲ್ ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿತ್ತು.

‘ಕಣ್ಣೂರು ಮಾದರಿ’ ಎಂದೇ ಹೆಸರಾಗಿರುವ ದಾಳಿಗಳಲ್ಲಿ ಜನರನ್ನು ಹೆದರಿಸಿ ದೂರ ಓಡಿಸಲು ಮತ್ತು ಬಲಿಪಶುವನ್ನು ಕ್ರೂರವಾಗಿ ಹತ್ಯೆಗೈಯುವ ಮುನ್ನ ಆತನನ್ನು ನಿಷ್ಕ್ರಿಯಗೊಳಿಸಲು ಈ ಬಾಂಬ್‌ಗಳನ್ನು ಬಳಸಲಾಗುತ್ತದೆ.

ನಮ್ಮ ಏಜೆಂಟರು ಮತ್ತು ಕ್ವಾರಿಗಳಿಂದ ನಮಗೆ ಅಮೋನಿಯಂ ನೈಟ್ರೇಟ್ ಮತ್ತು ಗಂಧಕ ಪೂರೈಕೆಯಾಗುತ್ತವೆ ಎಂದು ಓರ್ವ ಕಾರ್ಯಕರ್ತ ಹೇಳಿದ. ಎರಡು ವರ್ಷಗಳ ಹಿಂದೆ ಸ್ಫೋಟಕ ತಯಾರಿಕೆ ವೇಳೆ ಸ್ಫೋಟ ಸಂಭವಿಸಿ ಈತ ಪವಾಡಸದೃಶವಾಗಿ ಬದುಕುಳಿದಿದ್ದ. ಸಿದ್ಧಾಂತಕ್ಕೆ ಬದ್ಧನಾಗಿರುವ ಈತ ತನಗೆ ತನ್ನ ಜೀವಕ್ಕಿಂತ ಪಕ್ಷವೇ ಮುಖ್ಯ ಎನ್ನುತ್ತಾನೆ.

ಪೊಲೀಸರಷ್ಟೇ ಈ ಬಾಂಬ್ ಸಂಸ್ಕೃತಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪರಸ್ಪರ ಕಾದಾಡುತ್ತಿರುವ ಪಕ್ಷಗಳೂ ಈ ಕ್ರಿಮಿನಲ್ ಶಕ್ತಿಗಳನ್ನು ದೂರವಿಡಲು ಪ್ರಾಮಾಣಿಕವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಇಲಾಖೆಯ ಅಸಹಾಯಕತೆಯನ್ನು ಒಪ್ಪಿಕೊಂಡ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದರು.

ಹೆಚ್ಚಿನ ‘ಪಕ್ಷ ಗ್ರಾಮ’ಗಳಲ್ಲಿ ವಸ್ತ್ರ ಸಂಹಿತೆಯೂ ಇದೆ. ಸಿಪಿಎಂ ನಿಯಂತ್ರಿತ ಗ್ರಾಮಗಳಲ್ಲಿ ಯುವಕರು ಚೆ ಗೆವೆರಾ ಚಿತ್ರವಿರುವ ಕೆಂಪು ಬಣ್ಣದ ಶರ್ಟ್ ಅಥವಾ ಟಿ-ಶರ್ಟ್‌ಗಳನ್ನು ಧರಿಸಿದರೆ,ಆರೆಸ್ಸೆಸ್ ಗ್ರಾಮಗಳಲ್ಲಿ ಯುವಕರು ಕೇಸರಿ ಮುಂಡು ಮತ್ತು ಬಿಳಿಯ ಶರ್ಟ್‌ಗಳನ್ನು ತೊಡುತ್ತಾರೆ. ಇಲ್ಲಿ ಪಕ್ಷ ದ್ವೇಷ ಎಷ್ಟೊಂದು ಬಲವಾಗಿದೆಯೆಂದರೆ ವಿರೋಧಿ ‘ಪಕ್ಷ ಗ್ರಾಮ’ಗಳ ನಡುವೆ ವಿವಾಹ ಸಂಬಂಧಗಳು ನಡೆಯುವುದಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X