ಮಾಜಿ ಕೇಂದ್ರ ಸಚಿವೆ ಜಯವಂತಿಬೆನ್ ಮೆಹ್ತಾ ನಿಧನ

ಮುಂಬೈ, ನ.7: ಕೇಂದ್ರ ಸರಕಾರದ ಮಾಜಿ ರಾಜ್ಯ ಸಚಿವೆ ಬಿಜೆಪಿಯ ಜಯವಂತಿಬೆನ್ ಮೆಹ್ತಾ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು.ಅವರಿಗೆ 78 ವರ್ಷ ವಯಸ್ಸಾಗಿತ್ತು. 1999ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಅವರು ಇಂಧನ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಮುಂಬೈನಲ್ಲಿ ಭಾರತೀಯ ಜನತಾ ಪಕ್ಷದ ಮೂಲಕ ಸ್ಥಳೀಯ ಕಾರ್ಪೊರೇಟರ್ ಆಗಿ ರಾಜಕೀಯ ಪ್ರವೇಶಿಸಿದ ಜಯವಂತಿಬೆನ್ ಬಳಿಕ ಶಾಸಕರಾಗಿ ಮತ್ತು ಲೋಕಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
Next Story





