ಎನ್‌ಕೌಂಟರ‍್ ನಲ್ಲಿ ಓರ್ವ ಉಗ್ರನ ಸಾವು; ಇಬ್ಬರು ಯೋಧರಿಗೆ ಗಾಯ

ಶ್ರೀನಗರ, ನ.7: ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಸೋಮವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಯಿದೀನ್ ಸಂಘಟನೆಗೆ ಸೇರಿದ ಓರ್ವ ಉಗ್ರ ಮೃತಪಟ್ಟಿದ್ದಾನೆ. ಭಾರತೀಯ ಸೇನೆಯ ಇಬ್ಬರು ಯೋಧರು ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ.
ಶೋಪಿಯನ್ ವಾಂಗಮ್ ನಲ್ಲಿ ಸೇನೆ ಮತ್ತು ಯೋಧರ ನಡುವೆ ಗುಂಡಿನ ಕಾಳಗದಲ್ಲಿ ಹಿಜ್ಬುಲ್ ಮುಜಾಯಿದೀನ್ ಉಗ್ರ ಸಂಘಟನೆಯ ಸದ್ದಾಮ್ ಹುಸೈನ್ ಮಿರ‍್ ಎಂಬಾತನು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತ ಶೋಪಿಯನ್ ನ ಛತ್ರಿಪುರ ನಿವಾಸಿ ಎಂದು ತಿಳಿದು ಬಂದಿದೆ.
Next Story





