ಎತ್ತಿನ ಹೊಳೆ ವ್ಯಾಪ್ತಿಯಲ್ಲಿ ಶುಕ್ರವಾರ ತನಕ ಮರ ಕಡಿಯಬಾರದು: ರಾಷ್ಟ್ರೀಯ ಹಸಿರು ಪೀಠ ಆದೇಶ

ಹೊಸದಿಲ್ಲಿ, ನ.7: ಎತ್ತಿನ ಹೊಳೆ ಯೋಜನೆ ವ್ಯಾಪ್ತಿಯಲ್ಲಿ ಮುಂದಿನ ಶುಕ್ರವಾರ ತನಕ ಯಾವುದೇ ಮರಗಳನ್ನು ಕಡಿಯದಂತೆ ಇಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ನೀಡಿದೆ.
ಕೆ.ಎನ್ .ಸೋಮಶೇಖರ್ ಅವರು ಎತ್ತಿನ ಹೊಳೆ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಶನಲ್ ಗ್ರೀನ್ ಟ್ರಿಬ್ಯುನಲ್ ಮರ ಕಡಿಯುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ನ.11ಕ್ಕೆ ಮುಂದೂಡಿದೆ.
ಎತ್ತಿನ ಹೊಳೆ ಯೋಜನೆ ವ್ಯಾಪ್ತಿಯಲ್ಲಿ13.9 ಎಕ್ರೆ ಪ್ರದೇಶದಲ್ಲಿ ಮರ ಕಡಿಯಲು ಕೇಂದ್ರ ಪರಿಸರ ಇಲಾಖೆಯು ಅನುಮತಿ ನೀಡಿತ್ತು. ಇದೀಗ ಮರ ಕಡಿಯುವುದಕ್ಕೆ ಸ್ವತಂತ್ರ ಕುಮಾರ್ ಅಧ್ಯಕ್ಷರಾಗಿರುವ ಹಸಿರು ಪೀಠ ತಡೆಯಾಜ್ಞೆ ನೀಡಿದೆ
Next Story





