ದಿಲ್ಲಿಯ ವಾಯು ಮಾಲಿನ್ಯ ನಿಯಂತ್ರಣಕ್ಕೆ ಹೆಲಿಕಾಪ್ಟರ‍್ ಮೂಲಕ ನೀರು ಸಿಂಪಡಿಸಿ: ಗ್ರೀನ್ ಟ್ರಿಬ್ಯುನಲ್ ಆದೇಶ

ಹೊಸದಿಲ್ಲಿ, ನ.7: ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ ಎನ್ನುವುದು ಜಗತ್ತಿಗೆ ಗೊತ್ತು. ಇದನ್ನು ತಡೆಗಟ್ಟಲು ಏನು ಮಾಡಿದ್ದೀರಿ ಎಂದು ದಿಲ್ಲಿ ಸರಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತರಾಟೆಗೆ ತೆಗೆದುಕೊಂಡಿದೆ.
ಸುನೀತಾ ನಾರಾಯಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಸಿರು ಪೀಠದ ಅಧ್ಯಕ್ಷ ಸ್ವತಂತ್ರ ಕುಮಾರ್ ಅವರು ವಾಯು ಮಾಲಿನ್ಯದಿಂದಾಗಿ ಮಕ್ಕಳಿಗೆ ಉಸಿರಾಡಲು ಕಷ್ಟವಾಗುತ್ತಿದೆ. ಜನರು ಆಸ್ಪತ್ರೆ ಸೇರುತ್ತಿದ್ದಾರೆ. ಇಂತಹ ಪರಿಸ್ಥಿತಿ ಮುಂದುವರಿಯಬಾರದು. ಇದನ್ನು ಸರಿಪಡಿಸಲು ನೀರು ಸಿಂಪಡಿಸಬೇಕು ಹೆಲಿಕಾಪ್ಟರ್ ಮೂಲಕ ಯಾಕೆ ನೀರು ಸಿಂಪಡಿಸಬಾರದು? ಕಾಪ್ಟರ್ ಬಳಕೆ ಕೇವಲ ವಿಐಪಿ ಕೆಲಸಗಳಿಗೆ ಮಾತ್ರ ಸೀಮಿತವೊ ? ಎಂದು ಪ್ರಶ್ನಿಸಿದರು.
ಪರಸ್ಪರ ಆರೋಪ ಬೇಡ.ದಿಲ್ಲಿಯ ಸಮಸ್ಯೆ ಸರಿಯಾಗದಿದ್ದರೆ ಮುಂದೆ ಪಂಜಾಬ್, ಹರ್ಯಾಣಕ್ಕೆ ಕಷ್ಟವಾಗುತ್ತಿದೆ ಎಂದು ಹಸಿರು ಪೀಠ ಅಭಿಪ್ರಾಯಪಟ್ಟಿದೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಸರಕಾರ ಜಾರಿಗೊಳಿಸಿದ್ದ ಸಮ-ಬೆಸ ಸಂಚಾರ ನಿಯಮ ಫಲಕಾರಿಯಾಗದ ಬಗ್ಗೆ ಗ್ರೀನ್ ಟ್ರಿಬ್ಯುನಲ್ ಅಸಮಾಧಾನ ವ್ಯಕ್ತಪಡಿಸಿದೆ.





