ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಎನ್ ಡಿ ಟಿವಿ

ಹೊಸದಿಲ್ಲಿ, ನ.7: ಎನ್‌ಡಿ ಟಿವಿ ಹಿಂದಿ ಚಾನಲ್‌ಗೆ ಒಂದು ದಿನದ ನಿಷೇಧ ಹೇರಿರುವ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಎನ್‌ಡಿಟಿವಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.
ಕಳೆದ ಜನವರಿಯಲ್ಲಿ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ಕುರಿತಂತೆ ಬಿತ್ತರಿಸಿದ ವರದಿಯಲ್ಲಿ ಲೋಪದೋಷವಿದೆ ಎಂದು ಕೇಂದ್ರ ಸರಕಾರ ನವೆಂಬರ್ 8ರ ಮಧ್ಯರಾತ್ರಿಯಿಂದ ನವೆಂಬರ್ 9ರ ಮಧ್ಯರಾತ್ರಿಯವರಿಗೆ ಚಾನೆಲ್ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು.
ಸರಕಾರದ ಈ ಕ್ರಮವು ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ ಎಂದು ಎನ್‌ಡಿಟಿವಿ ಅಭಿಪ್ರಾಯಪಟ್ಟಿದೆ.
Next Story





