ಭಾರತ ಬ್ರಿಟನ್‌ನ ನಿಕಟ ಮಿತ್ರ: ತೆರೆಸಾ ಮೇ

ಲಂಡನ್, ನವೆಂಬರ್ 7: ಭಾರತ ಬ್ರಿಟನ್ ನ ಅತ್ಯಂತ ಹತ್ತಿರದ ಪ್ರಧಾನ ಮಿತ್ರರಾಷ್ಟ್ರ ಆಗಿದೆ ಎಂದು ಬ್ರಿಟನ್ ಪ್ರಧಾನಿ ತೆರೆಸಾ ಮೇ ಹೇಳಿದ್ದಾರೆಂದು ವರದಿಯಾಗಿದೆ. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ತಾನು ಭಾರತ ಸಂದರ್ಶಿಸಲಿದ್ದೇನೆ ಎಂದು ರವಿವಾರ ಸಂಡೆ ಟೆಲಿಗ್ರಾಫ್‌ಗೆ ಬರೆದ ಲೇಖನದಲ್ಲಿತಿಳಿಸಿದ್ದಾರೆ. ಜಗತ್ತಿನ ಪ್ರಧಾನ ಶಕ್ತಿಯಾಗಿ ಭಾರತವನ್ನು ವಿಶ್ಲೇಷಿಸಿದ ಮೇ,ಐತಿಹಾಸಿಕವಾದ ಮತ್ತುಸಾಂಸ್ಕೃತಿಕವಾದ ಧಾರಾಳ ಮೌಲ್ಯಗಳನ್ನು ಉಭಯ ರಾಷ್ಟ್ರಗಳು ಹಂಚಿಕೊಂಡಿವೆ. ತನ್ನ ಸಂದರ್ಶನದಲ್ಲಿ ಈ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಬಯಸಿದ್ದೇನೆ ಎಂದು ಅವರು ಹೇಳಿದ್ದಾರೆ. ಯುರೋಪ್‌ನ ಹೊರಗಿನ ಮೊದಲ ಸಂದರ್ಶನಕ್ಕೆ ನಾನು ಹೊರಡುತ್ತಿದ್ದೇನೆ. ಇದು ಪ್ರಧಾನಿಯಾದ ಬಳಿಕದ ಮೊದಲ ವ್ಯಾಪಾರ ದೌತ್ಯವಾಗಿದೆ. ಬ್ರಿಟನ್ ಮುಕ್ತ ನಿಲುವನ್ನು ಹೊಂದಿದೆ ಎಂಬ ಸಂದೇಶವೇ ಸಂದರ್ಶನದ್ದಾಗಿದೆ. ಬ್ರಕ್ಸಿಟ್‌ನಲ್ಲಿ ಉಂಟಾದ ಅವಕಾಶವನ್ನು ಉಪಯೋಗಿಸಿ ಜಗತ್ತಿನ ಸ್ವತಂತ್ರ ವ್ಯಾಪಾರ ಕೇಂದ್ರವಾಗಿ ಬ್ರಿಟನ್‌ನ್ನು ಬದಲಾಯಿಸುವೆ ಎಂದು ತೆರೆಸಾ ಮೇ ಹೇಳಿದ್ದಾರೆಎಂದು ವರದಿ ತಿಳಿಸಿದೆ.





