ದುಬೈ ರಸ್ತೆಗಳಲ್ಲಿ ವೇಗಮಿತಿಯ ಹೊಸ ಪಟ್ಟಿ
.jpg&MaxW=780&imageVersion=16by9&NCS_modified=20161027132821.jpeg)
ದುಬೈ,ನ.7: ದುಬೈನಲ್ಲಿ ಸಂಚಾರ ನಿಯಮಗಳು ಇನ್ನಷ್ಟು ಕಟ್ಟುನಿಟ್ಟುಗೊಳ್ಳುತ್ತಿವೆ. ರಸ್ತೆಗಳಲ್ಲಿ ಮತ್ತು ಜಂಕ್ಷನ್‌ಗಳಲ್ಲಿ ನಿಗಾ ಇಡಲು ಹೆಚ್ಚಿನ ಅತ್ಯಾಧುನಿಕ ರಾಡಾರ್‌ಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಹೀಗಾಗಿ ಚಾಲಕರು ಹೆಚ್ಚಿನ ಎಚ್ಚರಿಕೆ ಯಿಂದ ತಮ್ಮ ವಾಹನಗಳನ್ನು ಚಲಾಯಿಸುವುದು ಅನಿವಾರ್ಯವಾಗಿಬಿಟ್ಟಿದೆ.
ಮಿತಿ ಮೀರಿದ ವೇಗ ಯುಎಇಯಲ್ಲಿ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ಗಳಲ್ಲೊಂದಾಗಿದೆ. ದುಬೈನ ಪ್ರಮುಖ ರಸ್ತೆಗಳಲ್ಲಿ ವಾಹನಗಳಿಗೆ ಹೊಸದಾಗಿ ವೇಗಮಿತಿಯನ್ನು ನಿಗದಿಗೊಳಿಸಲಾಗಿದ್ದು, ದುಬೈ ಪೊಲೀಸ್ ವೆಬ್‌ಸೈಟಿನಲ್ಲಿ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಅಲ್ ಖೇಲ್ ಫಸ್ಟ್, ಅಲ್ ಫರ್ಸಾನ್‌ನಂತಹ ರಸ್ತೆಗಳಲ್ಲಿ ಪ್ರತಿ ಗಂಟೆಗೆ 60 ಕಿ.ಮೀ.ವೇಗಮಿತಿಯನ್ನು ನಿಗದಿಗೊಳಿಸಿದ್ದರೆ, ಮೊಹಮ್ಮದ್ ಬಿನ್ ಝಾಯೆದ್ ಮತ್ತು ಎಮಿರೇಟ್ಸ್ ರಸ್ತೆಗಳಲ್ಲಿ ಗರಿಷ್ಠ ಪ್ರತಿ ಗಂಟೆಗೆ 120 ಕಿ.ಮೀ.ವೇಗದಲ್ಲಿ ವಾಹನಗಳನ್ನು ಓಡಿಸಬಹುದಾಗಿದೆ. ಇನ್ನುಳಿದ ರಸ್ತೆಗಳಲ್ಲಿ ಇವೆರಡು ಮಿತಿಗಳ ನಡುವಿನ ವಿವಿಧ ವೇಗಮಿತಿಗಳನ್ನು ನಿಗದಿಗೊಳಿಸಲಾಗಿದೆ.







