ಬಿಹಾರದಲ್ಲಿ ಭೀಕರ ದುರಂತ: ಚಲಿಸುತ್ತಿದ್ದ ರೈಲಿಗೆ ನಾಲ್ವರು ಬಲಿ

ಸಮಷ್ಟಿಪುರ,ನ.7: ಬಿಹಾರದ ಸಮಷ್ಟಿಪುರ ಜಿಲ್ಲೆಯ ರಾಮಭದ್ರಾಪುರ ರೈಲ್ವೆ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಹಳಿಗಳನ್ನು ದಾಟುತ್ತಿದ್ದ ನಾಲ್ವರು ದಿಲ್ಲಿ-ಜಯನಗರ ಸ್ವತಂತ್ರತಾ ಸೇನಾನಿ ಎಕ್ಸಪ್ರೆಸ್ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಗಾಯ ಗೊಂಡಿದ್ದಾರೆ.
ಈ ನತದೃಷ್ಟರಿದ್ದ ಗುಂಪು ಛತ್ ಪೂಜಾದಿಂದ ಮನೆಗೆ ವಾಪಸಾಗುತ್ತಿತ್ತು ಬೆಳಿಗ್ಗೆ ಮಂಜು ಮುಸುಕಿದ್ದ ವಾತಾವರಣವಿದ್ದರಿಂದ ನಿಲ್ದಾಣದತ್ತ ಬರುತ್ತಿದ್ದ ರೈಲನ್ನು ಅವರು ಗಮನಿಸಿರಲಿಲ್ಲ ಎಂದು ಸಮಷ್ಟಿಪುರ ವಿಭಾಗದ ಹಿರಿಯ ಡಿಸಿಎಂ ಬೀರೇಂದ್ರ ಕುಮಾರ ತಿಳಿಸಿದರು.
ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ,ಓರ್ವ ಆಸ್ಪತೆಯಲ್ಲಿ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ದರ್ಭಂಗಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ಖಂಡಿಸಿ ಜನರು ಶವಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದ್ದರಿಂದ ಸಮಷ್ಟಿಪುರ ಮತ್ತು ದರ್ಬಂಗಾ ವಿಭಾಗಗಳ ನಡುವೆ ರೈಲು ಸೇವೆಗಳಿಗೆ ವ್ಯತ್ಯಯ ವುಂಟಾಗಿತ್ತು.
Next Story





