ಹೃದಯಾಘಾತವಾದರೂ ಪ್ರಯಾಣಿಕರ ಪ್ರಾಣ ಉಳಿಸಿದ ಬಸ್ ಚಾಲಕ

ಭೋಪಾಲ್, ನ. 7: ಹೃದಯಾಘಾತವಾಗಿ ಸಾವು ಸಮೀಪಿಸುತ್ತಿದ್ದ ವೇಳೆಯೂ ಆತ್ಮವಿಶ್ವಾಸಗೆಡದೆ ಬಸ್ ನಿಯಂತ್ರಿಸಿದ ಚಾಲಕರೊಬ್ಬರು ಹಲವಾರು ಪ್ರಯಾಣಿಕರನ್ನು ರಕ್ಷಿಸಿದ ಅಭೂತಪೂರ್ವ ಘಟನೆ ಮಧ್ಯಪ್ರದೇಶದ ಸೋಹೋರ್ ನಿಂದ ವರದಿಯಾಗಿದೆ.
ಸೋಹೋರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಚಲಾಯಿಸುತ್ತಿದ್ದ ಚಾಲಕ ಬಾಬುಲ್‌ರಿಗೆ ಪ್ರಯಾಣದ ನಡುವೆಯೇ ಹೃದಯಾಘಾತವುಂಟಾಗಿತ್ತು. ಹಠಾತ್ ಎದೆನೋವು ಕಾಣಿಸಿಕೊಂಡಾಗ ವೇಗವಾಗಿ ಅವರು ಬಸ್ ಚಲಾಯಿಸುತ್ತಿದ್ದರು. ಕೂಡಲೇ ಬಸ್‌ನ್ನು ನಿಯಂತ್ರಿಸಿ ರಸ್ತೆ ಬದಿ ಬಸ್‌ನಿಲ್ಲಿಸಲು ಅವರಿಗೆ ಸಾಧ್ಯವಾಯಿತು. ಬಸ್ ನಿಲ್ಲಿಸಿದ ಕೂಡಲೇ ಬಾಬುಲ್ ಕುಸಿದು ಬಿದ್ದರು. ಪ್ರಯಾಣಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾದರೂ ದಾರಿ ಮಧ್ಯೆಯೇ ಅವರು ಅಸುನೀಗಿದ್ದಾರೆಂದು ವರದಿ ತಿಳಿಸಿದೆ.
Next Story





