ಉಳ್ಳಾಲ ಪೊಲೀಸ್ ಠಾಣೆಗೆ ನೂತನ ಇನ್‌ಸ್ಪೆಕ್ಟರ್
ಉಳ್ಳಾಲ, ನ.7: ಬೆಂಗಳೂರು ಲೋಕಾಯುಕ್ತದಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್ ಗೋಪಿಕೃಷ್ಣ ಅವರು ಉಳ್ಳಾಲ ಠಾಣೆಯ ನೂತನ ಇನ್‌ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮೂರು ತಿಂಗಳ ಹಿಂದೆ ಪೊಲೀಸ್ ಇಲಾಖೆಯು ಗೋಪಿಕೃಷ್ಣ ಅವರನ್ನು ಉಳ್ಳಾಲ ಇನ್‌ಸ್ಪೆಕ್ಟರ್ ಆಗಿ ನಿಯೋಜಿಸಿ ಆದೇಶ ಹೊರಡಿಸಿತ್ತಾದರೂ ಲೋಕಾಯುಕ್ತ ಇಲಾಖಾ ಕರ್ತವ್ಯದಿಂದ ಹೊರಬರಲು ಗೋಪಿಕೃಷ್ಣ ಅವರಿಗೆ ಸಮಯ ತಗಲಿತ್ತು. 2014ರಲ್ಲಿ ಇನ್‌ಸ್ಪೆಕ್ಟರ್ ಧಮೇಂದ್ರ ವರ್ಗಾವಣೆಗೊಂಡ ನಂತರ ಉಳ್ಳಾಲ ಪೊಲೀಸ್ ಠಾಣೆಗೆ ಶಾಶ್ವತ ಇನ್‌ಸ್ಪೆಕ್ಟರ್ ಆಗಿ ಯಾರನ್ನೂ ನಿಯೋಜನೆ ಮಾಡಿರಲಿಲ್ಲ. ಧಮೇಂದ್ರರ ನಂತರ ಇನ್ಸ್‌ಪೆಕ್ಟರ್ ಪ್ರಮೋದ್, ಸವಿತ್ರ ತೇಜ ಮತ್ತು ಶಿವಪ್ರಕಾಶ್ ಬಿ.ಎ. ಅವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿತ್ತು.
ಇದೀಗ ಇಲಾಖೆಯು ಕುಂದಾಪುರ ಮೂಲದ ಅನುಭವಿ ಅಧಿಕಾರಿ ಗೋಪಿಕೃಷ್ಣ ಅವರನ್ನು ಉಳ್ಳಾಲ ಠಾಣೆಗೆ ಶಾಶ್ವತ ಇನ್‌ಸ್ಪೆಕ್ಟರ್ ಆಗಿ ನಿಯೋಜಿಸಲಾಗಿದೆ.
Next Story





gopi-krishna.jpg.jpg)

