ಟಿಪ್ಪು ಜಯಂತಿ ವಿರೋಧಕ್ಕೆ ಮುಸ್ಲಿಂ ಲೀಗ್ ಖಂಡನೆ
ಮಂಗಳೂರು, ನ.7: ಟಿಪ್ಪು ಜಯಂತಿ ಆಚರಣೆಗೆ ತಡೆಯೊಡ್ಡಲು ಯತ್ನಿಸುತ್ತಿರುವ ಬಿಜೆಪಿ-ಸಂಘ ಪರಿವಾರದ ಕೃತ್ಯವನ್ನು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ದಕ್ಷಿಣ ಭಾರತವನ್ನು ಆಳಿದ ರಾಜರ ಪೈಕಿ ಟಿಪ್ಪು ಸುಲ್ತಾನ್ ಸರ್ವಶ್ರೇಷ್ಠ. ಬ್ರಿಟಿಷರ ವಿರುದ್ಧ ಹೋರಾಡಿದ್ದಲ್ಲದೆ, ದೇಶಕ್ಕೆ ಮೊದಲ ಕ್ಷಿಪಣಿಯ ಕೊಡುಗೆ ನೀಡಿದ್ದು, ಕನ್ನಂಬಾಡಿ ಅಣೆಕಟ್ಟಿಗೆ ಚಾಲನೆ, ಬೆಂಗಳೂರಿನಲ್ಲಿ ಲಾಲ್‌ಬಾಗ್ ಸ್ಥಾಪನೆ, ಅನೇಕ ದೇವಸ್ಥಾನಗಳಿಗೆ ಅನುದಾನ ನೀಡಿದ ಟಿಪ್ಪು ಇತಿಹಾಸ ಪುರುಷ. ಕೊಲ್ಲೂರು ಮೂಕಾಂಬಿಕ ದೇವಾಲಯಕ್ಕೆ ನೀಡಿದ ಕೊಡುಗೆಯ ಪ್ರತೀಕವಾಗಿ ಟಿಪ್ಪು ಹೆಸರಿನಲ್ಲಿ ‘ಟಿಪ್ಪು ಕಾ ಸಲಾಂ’ ಪೂಜೆ ದಿನನಿತ್ಯ ನಡೆಯುತ್ತಿದೆ, ನೈವೇದ್ಯ ನೀಡಲಾಗುತ್ತಿದೆ. ಟಿಪ್ಪು ಜಯಂತಿಯ ಆಚರಣೆಗೆ ವಿರೋಧ ವ್ಯಕ್ತಪಡಿಸುವ ಬಿಜೆಪಿ-ಸಂಘಪರಿವಾರ ಮೊದಲು ಈ ಪೂಜೆ-ಪುನಸ್ಕಾರವನ್ನು ತಡೆಯಲಿ ಎಂದು ಲೀಗ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯೀಲ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
Next Story





