ವಿಚಾರಣಾಧೀನ ಕೈದಿಯ ಬಳಿ ಚೂರಿ, ಗಾಂಜಾ, ಮೊಬೈಲ್ ಪತ್ತೆ
ಮಂಗಳೂರು, ನ.7: ನಗರದ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯಾಗಿದ್ದ ಅಲ್ತಾಫ್ (30)ನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂದಿರುಗಿ ಕರೆದುಕೊಂಡು ಹೋಗಿ ಪರಿಶೀಲಿಸಿದಾಗ ಆತನ ಬಳಿ ಚೂರಿ, ಮಾತ್ರೆ, ಗಾಂಜಾ, ಮೊಬೈಲ್ ಪತ್ತೆಯಾಗಿದೆ.
ಅಲ್ತಾಫ್ ಗಾಂಜಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಸೊಮವಾರ ಬೆಳಗ್ಗೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕೋರ್ಟ್ಗೆ ಹಾಜರುಪಡಿಸಲು ಆತನನ್ನು ಕರೆದೊಯ್ಯಲಾಗಿತ್ತು. ವಿಚಾರಣೆ ನಡೆಸಿದ ಬಳಿಕ ವಾಹನದಲ್ಲಿ ಮರಳಿ ಕರೆದುಕೊಂಡು ಬರುವಾಗ ಹೆಡ್ಕಾನ್ಸ್ಟೇಬಲ್ ಪುಟ್ಟಣ್ಣ ಕೈದಿಯನ್ನು ತಪಾಸಣೆ ನಡೆಸಿದ್ದರು. ಈ ಸಂದರ್ಭ ತಪಾಸಣೆಗೆ ಕೈದಿ ಒಪ್ಪದಿದ್ದಾಗ, ಮತ್ತಷ್ಟು ಸಂಶಯಗೊಂಡು ವಿಚಾರಣೆ ನಡೆಸಿದರು. ಈ ವೇಳೆ ಶೂ ಒಳಗೆ ಗಾಂಜಾ, ಮಾದಕ ಮಾತ್ರೆಗಳು, ಮೊಬೈಲ್ ಪತ್ತೆಯಾಗಿದೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story