ಬಾರ್ಸಿಲೋನ ಪರ 500ನೆ ಗೋಲು ಬಾರಿಸಿದ ಮೆಸ್ಸಿ
ಮ್ಯಾಡ್ರಿಡ್, ನ.7: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಬಾರಿಸಿದ 500ನೆ ಗೋಲು ನೆರವಿನಿಂದ ಬಾರ್ಸಿಲೋನ ತಂಡ ಸೆವಿಲ್ಲಾ ವಿರುದ್ಧದ ಲಾ ಲಿಗ ಪಂದ್ಯವನ್ನು 2-1 ಗೋಲು ಅಂತರದಿಂದ ಗೆದ್ದುಕೊಂಡಿದೆ.
ಮಂಗಳವಾರ ಇಲ್ಲಿ ನಡೆದ ಚಾಂಪಿಯನ್ಸ್ ಲೀಗ್‌ನಲ್ಲಿ ಬಾರ್ಸಿಲೋನ ತಂಡ ಮ್ಯಾಂಚೆಸ್ಟರ್ ಸಿಟಿ ವಿರುದ್ಧ 3-1 ರಿಂದ ಸೋತಿತ್ತು. ಸೆವಿಲ್ಲಾ ತಂಡ ಪಂದ್ಯದ ಮೊದಲಾರ್ಧದಲ್ಲಿ(15ನೆ ನಿಮಿಷ) ಮುನ್ನಡೆ ಸಾಧಿಸಿತ್ತು. ಮೊದಲಾರ್ಧ ಕೊನೆಗೊಳ್ಳುವ ಕೆಲವೇ ನಿಮಿಷದ ಮೊದಲು 43ನೆ ನಿಮಿಷದಲ್ಲಿ ಗೋಲು ಬಾರಿಸಿದ ಮೆಸ್ಸಿ ಬಾರ್ಸಿಲೋನ 1-1 ರಿಂದ ಸಮಬಲ ಸಾಧಿಸಲು ನೆರವಾದರು.
ಮೆಸ್ಸಿ ಸೌಹಾರ್ದ ಪಂದ್ಯ ಸಹಿತ ಬಾರ್ಸಿಲೋನದ ಪರ 500ನೆ ಗೋಲು ಬಾರಿಸಿ ಗಮನ ಸೆಳೆದರು. 61ನೆ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದ ಸುಯರೆಝ್ ಬಾರ್ಸಿಲೋನಕ್ಕೆ 2-1 ರೋಚಕ ಗೆಲುವು ತಂದರು.
Next Story





