2021ರ ತನಕ ಮ್ಯಾಡ್ರಿಡ್‌ನೊಂದಿಗೆ ರೊನಾಲ್ಡೊ ಒಪ್ಪಂದ

ಮ್ಯಾಡ್ರಿಡ್, ನ.7: ಕ್ರಿಸ್ಟಿಯಾನೊ ರೊನಾಲ್ಡೊ ಸ್ಪೇನ್‌ನ ದೈತ್ಯ ಕ್ಲಬ್ ರಿಯಲ್ ಮ್ಯಾಡ್ರಿಡ್‌ನೊಂದಿಗೆ 2021ರ ತನಕ ಒಪ್ಪಂದ ಮಾಡಿಕೊಂಡಿದ್ದಾರೆ.
ನ.7 ಸೋಮವಾರ ಮಧಾಹ್ನ 1:30ಕ್ಕೆ ಸ್ಯಾಂಟಿಯಾಗೊ ಸ್ಟೇಡಿಯಂನಲ್ಲಿ ನಡೆಯಲಿರುವ ಅಧಿಕೃತ ಕಾರ್ಯಕ್ರಮದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಒಪ್ಪಂದವನ್ನು ಮುಂದಿನ ಐದು ವರ್ಷಕ್ಕೆ ನವೀಕರಣಗೊಳಿಸಲಿದ್ದಾರೆ ಎಂದು ಮ್ಯಾಡ್ರಿಡ್ ರವಿವಾರ ಬಿಡುಗಡೆ ಮಾಡಿದ್ದ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿತ್ತು.
ಮ್ಯಾಡ್ರಿಡ್‌ನೊಂದಿಗೆ ಒಪ್ಪಂದವನ್ನು ಮುಂದುವರಿಸಿರುವ 31ರ ಹರೆಯದ ರೊನಾಲ್ಡೊ ಅವರ ಗಾರೆತ್ ಬೇಲ್, ಲೂಕಾ ಮೊಡ್ರಿಕ್ ಹಾಗೂ ಟೊನಿ ಕ್ರೂಸ್ ಹೆಜ್ಜೆಯನ್ನು ಅನುಸರಿಸಿದ್ದಾರೆ.
ರೊನಾಲ್ಡೊ ಈ ಹಿಂದೆ ಮ್ಯಾಡ್ರಿಡ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದ 2018ಕ್ಕೆ ಕೊನೆಗೊಳ್ಳಲಿದೆ. ಅಮೆರಿಕದ ನಿಯತಕಾಲಿಕ ಫೋರ್ಬ್ಸ್ ಪ್ರಕಾರ ರೊನಾಲ್ಡೊ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುವಾಗಿದ್ದಾರೆ. ರೊನಾಲ್ಡೊ 2016ರಲ್ಲಿ ವೇತನ ಹಾಗೂ ಜಾಹೀರಾತು ಒಪ್ಪಂದದ ಮೂಲಕ 88 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ.
2009ರಲ್ಲಿ ವಿಶ್ವ ದಾಖಲೆಯ ಸಂಭಾವನೆ ಪಡೆದು ಮ್ಯಾಂಚೆಸ್ಟರ್ ಯುನೈಟೆಡ್‌ನಿಂದ ಮ್ಯಾಡ್ರಿಡ್ ತಂಡವನ್ನು ಸೇರ್ಪಡೆಯಾಗಿದ್ದ ರೊನಾಲ್ಡೊ ಕಳೆದ 8 ಋತುವಿನಲ್ಲಿ 360 ಪಂದ್ಯಗಳಲ್ಲಿ 371 ಗೋಲುಗಳನ್ನು ಬಾರಿಸಿದ್ದಾರೆ.







