ದ.ಕ. ಜಿಲ್ಲೆಗೆ 25 ಪೊಲೀಸ್ ಗಸ್ತು ವಾಹನ: ಜಿ.ಪರಮೇಶ್ವರ್
ಮಂಗಳೂರು, ನ.7: ಯಾವುದೇ ಅಹಿ ತಕರ ಘಟನೆ ಸಂಭವಿಸಿದ ಸಂದರ್ಭ ಪೊಲೀಸರು ಅತೀ ಶೀಘ್ರವಾಗಿ ಘಟನಾ ಸ್ಥಳಕ್ಕೆ ತಲುಪಲು ಅನುಕೂಲವಾಗಲು ದ.ಕ. ಜಿಲ್ಲೆಗೆ ಹೆಚ್ಚುವರಿ 25 ಗಸ್ತು ಪೊಲೀಸ್ ವಾಹನಗಳನ್ನು ನೀಡಲಾ ಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 5 ನಿಮಿಷದೊಳಗೆ ಪ್ರಕರಣ ನಡೆದ ಸ್ಥಳಕ್ಕೆ ತಲುಪಲು ಪೊಲೀಸ್ ಗಸ್ತು ವಾಹನ ನೀಡಲಾಗಿದೆ. ಅದೇ ರೀತಿ ಮಂಗಳೂರು ಪೊಲೀಸ್ ಕಮಿ ಷನರೇಟ್ ವ್ಯಾಪ್ತಿಯಲ್ಲೂ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ರುದ್ರೇಶ್ ಹತ್ಯೆಯಲ್ಲಿ ಸಚಿವರ ಕೈವಾಡವಿದೆ ಎಂಬ ಬಿಜೆಪಿ ಮುಖಂ ಡರ ಆರೋಪದ ಕುರಿತಂತೆ ಪ್ರತಿಕ್ರಿಯಿ ಸಿದ ಗೃಹಸಚಿವರು, ರುದ್ರೇಶ್ ಹತ್ಯೆಯ ಬಗ್ಗೆ ಸಾಕ್ಷಗಳಿವೆ ಎಂದು ಹೇಳುವವರು ಅದನ್ನು ಪೊಲೀಸರಿಗೆ ನೀಡಿ ತನಿಖೆಗೆ ಸಹಕರಿಸಲಿ. ಇಲ್ಲವಾ ದಲ್ಲಿ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಟಿಪ್ಪು ಪರ ಘೋಷಣೆ ಕೂಗಿದವರಿಂದಲೇ ವಿರೋಧ
ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುತ್ತಿರುವವರ ವಿರುದ್ಧ ಹರಿ ಹಾಯ್ದ ಸಚಿವರು, ಟಿಪ್ಪು ಕಿರೀಟ ಧರಿಸಿ, ಖಡ್ಗ ಹಿಡಿದು ಟಿಪ್ಪು ಪರ ಘೋಷಣೆ ಕೂಗಿದವರೇ ಇಂದು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರುವುದಾದಲ್ಲಿ ಸ್ವಾಗತ
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಹೆಗ್ಡೆ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲು ಬಯಸಿದರೆ ಅವರನ್ನು ಸ್ವಾಗತಿಸು ವುದಾಗಿ ಹೇಳಿದರು.





