ವೀಸಾ ನಿಯಮಗಳ ಸರಳೀಕರಣಕ್ಕೆಯುಕೆ ಪ್ರಧಾನಿಗೆ ಮನವಿ: ಸಚಿವ ದೇಶಪಾಂಡೆ
ಬೆಂಗಳೂರು, ನ. 7: ಯು.ಕೆ.ಪ್ರಧಾನಿ ಥೆರೆಸಾ ಮೆ ಅವರು ನ.8ರಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ವೀಸಾ ಶುಲ್ಕ ಇಳಿಕೆ ಮತ್ತು ವೀಸಾ ನೀಡುವುದರಲ್ಲಿನ ನಿಯಮಗಳಲ್ಲಿ ಸರಳೀಕರಿಸುವಂತೆ ಮನವಿ ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಕೆ.ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಬೆಂಗಳೂರಿನ ಐಟಿ-ಬಿಟಿ, ಏರೋಸ್ಪೇಸ್, ಾರ್ಮ, ಹೂಡಿಕೆಗೆ, ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಹೂಡಿಕೆ ಪ್ರಶಸ್ತ್ಯ ತಾಣ ಎಂಬುದರ ಸೂಚಕ ಎಂದರು.
ಯುಕೆ ಮೂಲಕ ಹಲವು ಕಂಪೆನಿಗಳು ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ಯುಕೆ ಮತ್ತು ಕರ್ನಾಟಕ ಉತ್ತಮ ಬಾಂಧವ್ಯ ಹೊಂದಿವೆ. ಈ ಸಂಬಂಧ ಇನ್ನೂ ಗಟ್ಟಿಯಾಗುತ್ತಿರುವುದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಗೆ ನಾಂದಿಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ ಉದ್ದಿಮೆಗೆ ವೀಸಾ ಅಗತ್ಯವಿದ್ದು, ಐಟಿ ಇಂಜಿನಿಯರ್ಸ್ 3ರಿಂದ 12 ತಿಂಗಳ ಕಾಲ ತಮ್ಮ ಯೋಜನೆಗಳ ಕೆಲಸಕ್ಕೆ ಯುಕೆಗೆ ತೆರಳಿ ಹಿಂದಿರುಗಲು ಅನುಕೂಲ ಕಲ್ಪಿಸಬೇಕು. ಆ ಹಿನ್ನೆಲೆಯಲ್ಲಿ ವೀಸಾ ನಿಯಮಗಳನ್ನು ಸರಳೀಕರಿಸಬೇಕು ಎಂದು ಕೋರಲಾಗುವುದು ಎಂದರು.
ರಾಜ್ಯದ ವಿದ್ಯಾರ್ಥಿಗಳು, ಯುಕೆ ವಿಶ್ವ ವಿದ್ಯಾನಿಲಯ ಗಳಲ್ಲಿ ವ್ಯಾಸಂಗ ಮಾಡಲು ಅಧ್ಯಯನ ವೀಸಾ ಪಡೆಯಲು ಕಷ್ಟವಾಗುತ್ತಿದ್ದು, ಇದರಿಂದ ಅಮೆರಿಕಗೆ ಹೆಚ್ಚಿನ ಜನರು ತೆರಳುತ್ತಿದ್ದಾರೆ. ಪ್ರವಾಸಿ ವೀಸಾ ಪಡೆಯುವುದು ಕಷ್ಟ. ಆದರೆ, ನಾ ವು ಯು.ಕೆ ಪ್ರವಾಸಿಗರಿಗೆ ಆನ್‌ಲೈನ್ ವೀಸಾ ನೀಡುತ್ತದೆ ಎಂದರು.





