ಟಿಪ್ಪುಜಾತ್ಯತೀತ ರಾಜ: ಸಿದ್ದರಾಮಯ್ಯ
ಮೈಸೂರು, ನ.7: ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿ ಬಿಜೆಪಿರಾಜಕೀಯ ಮಾಡುತ್ತಿದೆ. ಸಮಾಜದಲ್ಲಿ ಶಾಂತಿ ಕದಡಿ, ಸೌಹಾರ್ದಕ್ಕೆ ಧಕ್ಕೆ ತರುತ್ತಿದೆ. ಟಿಪ್ಪು ಜಯಂತಿ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು. ಸೋಮವಾರ ಒಂದು ದಿನದ ಪ್ರವಾಸ ಕೈಗೊಂಡು ಮೈಸೂರು ನಗರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ, ಮಂಡಕಳ್ಳಿ ವಿವಾನ ನಿಲ್ದಾಣದ ಬಳಿ ಪತ್ರಕರ್ತರೊಂದಿಗೆ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿ, ತಮ್ಮ ಇಬ್ಬರು ಮಕ್ಕಳನ್ನು ಒತ್ತೆಯಾಳಾಗಿಟ್ಟ ಟಿಪ್ಪು ದೇಶಪ್ರೇಮಿ ಹಾಗೂ ಜಾತ್ಯಾತಿತ ರಾಜ ಎಂದು ಬಣ್ಣಿಸಿದರು.ಪ್ಪು ಆಳ್ವಿಕೆಯಲ್ಲಿ ಹಿಂದೂ-ಮುಸ್ಲಿಮ್‌ರ ನಡುವೆ ಸಾಮರಸ್ಯ ಇತ್ತು. ಇದಕ್ಕೆ ಸಾಕ್ಷಿ ಎಂಬಂತೆ ಟಿಪ್ಪುಅನೇಕ ಹಿಂದೂ ದೇವಸ್ಥಾನ ಗಳನ್ನು ಕಟ್ಟಿಸಿದ್ದಾರೆ. ಅನೇಕ ದೇವಸ್ತಾನಗಳ ಅಭಿವೃದ್ಧಿಗೆ ಕಾರಣರಾ ಗಿದ್ದಾರೆ. ಟಿಪ್ಪು ಓರ್ವ ಜಾತ್ಯಾತಿತ ರಾಜ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಆದರೂ, ಬಿಜೆಪಿ ರಾಜಕೀಯ ಲಾಭಕ್ಕೆ ಟಿಪ್ಪು ಜಯಂತಿ ಆಚರಣೆಯನ್ನು ವಿರೋಸುತ್ತಿದೆ ಎಂದು ನುಡಿದರು. ಬೆಂಗಳೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಸಂಶಯಾ ಸ್ಪದ ಸಾವಿನ ಹಿಂದೆ ಸಚಿವ ರೋಶನ್‌ಬೇಗ್ ಕೈವಾಡವಿದೆ ಎಂದು ಬಿಜೆಪಿ ಮುಖಂಡರಾದ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಮಾಡಿರುವ ಹೇಳಿಕೆ ಬಾಲಿಷವಾಗಿದ್ದು ಈ ಹೇಳಿಕೆ ರಾಜಕಾರಣಿಗಳ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದಲ್ಲ. ರುದ್ರೇಶ್ ಕೊಲೆಗೆ ಕಾಂಗ್ರೆಸ್ ಸುಪಾರಿ ಕೊಟ್ಟಿದೆ ಎನ್ನುವುದಕ್ಕೆ ಇವರ ಬಳಿ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದರು. ನಂತರ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರು ತಾಲೂಕಿನ ಬೀರಿಹುಂಡಿಗೆ ತೆರಳಿದ ಸಿಂದ ಬೀರೇಶ್ವರ ದೇವಸ್ಥಾನದ ಕಳಸ ಸ್ಥಾಪನೆ, ಕಡಕೋಳದಲ್ಲಿ ಕೆಇಬಿ ಉಪ ಕೇಂದ್ರ ಕಚೇರಿ ಮತ್ತು ಗೋಪಾಲಪುರ- ಮಲ್ಲೂರ್ ಜಂಕ್ಷನ್‌ನಲ್ಲಿ 11 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು. ನಡುವೆ, ಇಂದು ಸಿಎಂ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್‌ನಲ್ಲಿ ನಡೆಯಬೇಕಾಗಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯನ್ನು ಮುಂದೂಡಲಾಯಿತು. ಸಿಎಂ ಆಗಮನದ ವೇಳೆ, ಎಂಎಲ್‌ಸಿ ಆರ್.ಧರ್ಮಸೇನಾ, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಡಿಸಿಪಿ ಶೇಖರ್ ಹಾಜರಿದ್ದರು.





