Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹಾತ್ಮ ಗಾಂಧೀಜಿಯ ಮೊಮ್ಮಗ, ನಾಸಾದ ಮಾಜಿ...

ಮಹಾತ್ಮ ಗಾಂಧೀಜಿಯ ಮೊಮ್ಮಗ, ನಾಸಾದ ಮಾಜಿ ವಿಜ್ಞಾನಿ ಕಾನುಭಾಯಿ ಗಾಂಧಿ ನಿಧನ

ವಾರ್ತಾಭಾರತಿವಾರ್ತಾಭಾರತಿ8 Nov 2016 10:37 AM IST
share
ಮಹಾತ್ಮ ಗಾಂಧೀಜಿಯ ಮೊಮ್ಮಗ, ನಾಸಾದ ಮಾಜಿ ವಿಜ್ಞಾನಿ ಕಾನುಭಾಯಿ ಗಾಂಧಿ ನಿಧನ

ಸೂರತ್/ಅಹ್ಮದಾಬಾದ್, ನ.8: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಮೊಮ್ಮಗ ಹಾಗೂ ನಾಸಾದ ಮಾಜಿ ವಿಜ್ಞಾನಿ ಕಾನುಭಾಯಿ ಗಾಂಧಿ(87 ವರ್ಷ) ಸೋಮವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾನುಭಾಯಿ ಅ.22ರಂದು ಹೃದಯಾಘಾತ ಹಾಗೂ ಮೆದುಳು ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ದಿನಗಳಿಂದ ಕೋಮಾಸ್ಥಿತಿಗೆ ತಲುಪಿದ್ದ ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಗಾಂಧಿ ಅವರು ಪತ್ನಿ ಶಿವಲಕ್ಷ್ಮೀ ಅವರನ್ನು ಅಗಲಿದ್ದಾರೆ.

 1930ರ ಮಾರ್ಚ್-ಎಪ್ರಿಲ್‌ನಲ್ಲಿ ನಡೆದಿದ್ದ ಐತಿಹಾಸಿಕ ಉಪ್ಪು ಸತ್ಯಾಗ್ರಹದ ವೇಳೆ ಗುಜರಾತ್‌ನ ದಂಡಿ ಹಳ್ಳಿಯ ಬೀಚ್‌ನಲ್ಲಿ ಮಹಾತ್ಮ ಗಾಂಧಿಯವರ ಊರುಗೋಲಿನ ತುದಿಯನ್ನ್ನು ಹಿಡಿದುಕೊಂಡು ಗಾಂಧೀಜಿಗಿಂತ ಮುಂದಕ್ಕೆ ಹೆಜ್ಜೆ ಹಾಕಿದ್ದ ಕಾನುಭಾಯಿ ಫೋಟೊ ಆ ಕಾಲದಲ್ಲಿ ಎಲ್ಲರ ಗಮನ ಸೆಳೆದಿತ್ತು.

ಕಾನುಭಾಯಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟರ್‌ನ ಮೂಲಕ ಶೋಕ ವ್ಯಕ್ತಪಡಿಸಿದ್ದು,‘‘ಗಾಂಧೀಜಿಯ ಮೊಮ್ಮಗ ಕಾನುಭಾಯಿ ನಿಧನದಿಂದ ನನಗೆ ತೀವ್ರ ನೋವಾಗಿದೆ. ಅವರನ್ನು ಹಲವು ಬಾರಿ ಭೇಟಿಯಾದ ನೆನಪು ಈಗಲೂ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದರು.

‘‘ಕಳೆದ ವರ್ಷ ಅಮೆರಿಕದಿಂದ ವಾಪಸಾದ ಬಳಿಕ ಕನು ದಾದಾ ಕಳೆದ 9 ತಿಂಗಳಿಂದ ಗಾಂಧಿ ಆಶ್ರಮದಲ್ಲಿ ನೆಲೆಸಿದ್ದರು. ಅಜ್ಜನ ಮನೆಯಲ್ಲಿ ಸಾಯಬೇಕೆನ್ನುವ ಬಯಕೆ ಅವರಲ್ಲಿತ್ತು. ಬೇಸರದ ವಿಷಯವೆಂದರೆ ಅದು ಸಾಧ್ಯವಾಗಲಿಲ್ಲ. ಮೊದಲಿಗೆ ಗುಜರಾತ್ ವಿದ್ಯಾಪೀಠಕ್ಕೆ ಸ್ಥಳಾಂತರಗೊಂಡಿದ್ದ ಅವರು ಬಳಿಕ ದಿಲ್ಲಿಯ ವೃದ್ದಾಶ್ರಮಕ್ಕೆ ಸೇರಿದ್ದರು. ಅಲ್ಲಿಂದ ಸೂರತ್‌ಗೆ ವಾಪಸಾಗಿದ್ದರು ಎಂದು ಗಾಂಧಿ ಆಶ್ರಮದ ಎದುರುಗಡೆ ಖಾದಿ ಮಳಿಗೆಯನ್ನು ಹೊಂದಿರುವ ಧಿಮಂತ್ ಬಡಿಯಾ ಹೇಳಿದ್ದಾರೆ.

ಕಾನುಭಾಯಿ ನಿಧನಕ್ಕೆ ಗುಜರಾತ್ ಕಾಂಗ್ರೆಸ್ ಶೋಕ ವ್ಯಕ್ತಪಡಿಸಿದೆ.

1928ರಲ್ಲಿ ಬಾಪೂಜಿಯ ಮೂರನೆ ಮಗ ರಾಮ್‌ದಾಸ್ ಮಗನಾಗಿ ಕಾನುಭಾಯಿ ಜನಿಸಿದ್ದರು. ಕಾನುಭಾಯಿ ಗಾಂಧೀಜಿಯ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರು. ಕಾನುಭಾಯಿಗೆ 17 ವರ್ಷವಾಗಿದ್ದಾಗ ಗಾಂಧೀಜಿ ದಿಲ್ಲಿಯಲ್ಲಿ ಹತ್ಯೆಯಾಗಿದ್ದರು.

ಬಾಪೂಜಿಯ ನಿಧನದ ಬಳಿಕ ಕಾನುಭಾಯಿ ಜೀವನದಲ್ಲಿ ಮಹತ್ತರ ಬದಲಾವಣೆಯಾದವು. ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಮೆರಿಕದ ರಾಯಭಾರಿ ಜಾನ್ ಕೆನ್ನತ್‌ರನ್ನು ಭೇಟಿಯಾಗಿ ಕಾನುಭಾಯಿ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ಎಂಐಟಿ ಸಂಸ್ಥೆಗೆ ಸೇರಿಸಿದ್ದರು. ಅಲ್ಲಿ ಅವರು ಗಣಿತದಲ್ಲಿ ಉನ್ನತ ಅಧ್ಯಯನ ನಡೆಸಿದ್ದರು.

ವಿವಾಹದ ಬಳಿಕ ಕಾನುಭಾಯಿ ಹಾಗೂ ಅವರ ಪತ್ನಿ ಶಿವಲಕ್ಷ್ಮೀ ಅಮೆರಿಕದ ವರ್ಜಿನಿಯದ ಹ್ಯಾಂಪ್ಟನ್‌ನಲ್ಲಿ ವಾಸವಾಗಿದ್ದರು. ಕಾನುಭಾಯಿ ನಾಸಾ ಲ್ಯಾಂಗ್ಲಿ ರಿಸರ್ಚ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಅಮೆರಿಕದಲ್ಲಿ ಹಲವು ವರ್ಷ ಕಳೆದ ಬಳಿಕ ಕನುಬಾಯಿ ದಂಪತಿ ಭಾರತಕ್ಕೆ ವಾಪಸಾಗಿದ್ದರು.

ಭಾರತಕ್ಕೆ ವಾಪಸಾದ ಬಳಿಕ ಯಾರಿಗೂ ಭಾರವಾಗಿರಲು ಬಯಸದ ಕಾನುಭಾಯಿ ದಂಪತಿ ಭಾರತದಲ್ಲಿ ಇರುವಷ್ಟು ಕಾಲ ವೃದ್ದಾಶ್ರಮದಲ್ಲಿ ದಿನ ಕಳೆದರು.

ಬಾಪೂಜಿಯ ನಿಧನದ ಬಳಿಕ ಕನುಬಾಯಿ ಜೀವನದಲ್ಲಿ ಮಹತ್ತರ ಬದಲಾವಣೆಯಾದವು. ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಮೆರಿಕದ ರಾಯಭಾರಿ ಜಾನ್ ಕೆನ್ನತ್‌ರನ್ನು ಭೇಟಿಯಾಗಿ ಕನುಬಾಯಿ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ಎಂಐಟಿ ಸಂಸ್ಥೆಗೆ ಸೇರಿಸಿದ್ದರು. ಅಲ್ಲಿ ಅವರು ಗಣಿತದಲ್ಲಿ ಉನ್ನತ ಅಧ್ಯಯನ ನಡೆಸಿದ್ದರು.

ವಿವಾಹದ ಬಳಿಕ ಕನುಬಾಯಿ ಹಾಗೂ ಅವರ ಪತ್ನಿ ಶಿವಲಕ್ಷ್ಮೀ ಅಮೆರಿಕದ ವರ್ಜಿನಿಯದ ಹ್ಯಾಂಪ್ಟನ್‌ನಲ್ಲಿ ವಾಸವಾಗಿದ್ದರು. ಕನುಬಾಯಿ ನಾಸಾ ಲ್ಯಾಂಗ್ಲಿ ರಿಸರ್ಚ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಅಮೆರಿಕದಲ್ಲಿ ಹಲವು ವರ್ಷ ಕಳೆದ ಬಳಿಕ ಕನುಬಾಯಿ ದಂಪತಿ ಭಾರತಕ್ಕೆ ವಾಪಸಾಗಿದ್ದರು.

ಭಾರತಕ್ಕೆ ವಾಪಸಾದ ಬಳಿಕ ಯಾರಿಗೂ ಭಾರವಾಗಿರಲು ಬಯಸದ ಕನುಬಾಯಿ ದಂಪತಿ ಭಾರತದಲ್ಲಿ ಇರುವಷ್ಟು ಕಾಲ ವೃದ್ದಾಶ್ರಮದಲ್ಲಿ ದಿನ ಕಳೆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X