Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮಾಸ್ತಿಗುಡಿ ಸಿನೆಮಾ ಚಿತ್ರೀಕರಣದ ವೇಳೆ...

ಮಾಸ್ತಿಗುಡಿ ಸಿನೆಮಾ ಚಿತ್ರೀಕರಣದ ವೇಳೆ ದುರಂತಕ್ಕೀಡಾಗಿ ಮೃತಪಟ್ಟವರಲೊಬ್ಬರಾದ ಅನಿಲ್ ಪ್ರತಿಭಾನ್ವಿತ ಯುವ ಖಳನಟ. ಅವರ ಸಿನಿ ಪಯಣದ ಒಂದಿಷ್ಟು ವಿವರ....

ವಾರ್ತಾಭಾರತಿವಾರ್ತಾಭಾರತಿ8 Nov 2016 2:41 PM IST
share

ಯಾರು ಈ ಅನಿಲ್?

 ನಟ ಅನಿಲ್ ಕುಮಾರ್ ಹುಟ್ಟಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಬನಶಂಕರಿ ಬಳಿಯಿರುವ ಕದಿರೇನಹಳ್ಳಿ ಇವರ ಊರು. ವೇಣುಗೋಪಾಲ್ ಹಾಗೂ ಸರಸ್ವತಿ ದಂಪತಿಯ ಮೂರನೆ ಪುತ್ರನಾಗಿರುವ ಇವರಿಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ತಂಗಿಯರಿದ್ದಾರೆ. ಪತ್ನಿ ಭ್ರಮ್ಯಾ ಇವರಿಗೆ 6 ವರ್ಷದ ಗಂಡು ಮಗು ಹಾಗೂ 3 ವರ್ಷದ ಒಂದು ಹೆಣ್ಣು ಮಗು ಇದೆ.

ಜಿಮ್ ತರಬೇತುದಾರ

ಚಿತ್ರರಂಗದಲ್ಲಿ ಖಳನಟ ಆದ್ಮೇಲೆ ಅನಿಲ್, ಸ್ವಂತ ಜಿಮ್ ನಡೆಸುತ್ತಿದ್ದರು. ಹಲವು ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದರು. ’ಮಾಸ್ತಿ ಗುಡಿ’ ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್‌ಮಾಡಲು ಮನೆಯಲ್ಲೇ ಪ್ರತಿನಿತ್ಯ ದೇಹ ದಂಡಿಸುತ್ತಿದ್ದರು.

ಬೀಡಾ ಅಂಗಡಿಯಿಂದ ಚಿತ್ರಲೋಕದತ್ತ

ಚಲನಚಿತ್ರ ಉದ್ಯಮಕ್ಕೆ ಬರುವ ಮುನ್ನ ನಟ ಅನಿಲ್ ಕುಮಾರ್ ಬೀಡಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತದನಂತರ 80 ರೂಪಾಯಿಗೆ ಟರ್ನರ್ ಕೆಲಸ ಕೂಡ ಮಾಡಿದ್ದರು.

ಸಿನಿ ಲೋಕಕ್ಕೆ ಆಕಸ್ಮಿಕ ಎಂಟ್ರಿ

ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಅನಿಲ್ ಕುಮಾರ್ ಸಿನಿಮಾ ಜಗತ್ತಿನಲ್ಲಿ ಮಿಂಚುವ ಕನಸು ಕಂಡವರಲ್ಲ. ಆಕಸ್ಮಿಕವಾಗಿ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಟ್ಟ ಅನಿಲ್ ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅನಿಲ್ ಸಿನಿಮಾಗೆ ಬರಲು ಕಾರಣ ದುನಿಯಾ ವಿಜಿ

ಅನಿಲ್ ಸಿನಿಮಾ ಕ್ಷೇತ್ರಕ್ಕೆ ಬರಲು ಮುಖ್ಯ ಕಾರಣ ನಟ ದುನಿಯಾ ವಿಜಯ್. ಒಮ್ಮೆ ಗಾಡಿಗಳನ್ನು ಸೀಜ್ ಮಾಡಲು ಅನಿಲ್ ಹೋಗಿದ್ದಾಗ, ಅಲ್ಲಿ ಸಿನಿಮಾದ ಫೈಟರ್‌ಗಳನ್ನು ನೋಡಿ ಪರಿಚಯ ಮಾಡಿಕೊಂಡರು. ತದನಂತರ ಕೃಷ್ಣರಾವ್ ಪಾರ್ಕ್‌ನಲ್ಲಿ ಫೈಟಿಂಗ್‌ತರಬೇತಿ ಪಡೆಯಲು ಹೋದಾಗ, ಅಲ್ಲಿಗೆ ಬಂದಿದ್ದ ದುನಿಯಾ ವಿಜಯ್ರನ್ನು ಅನಿಲ್ ಪರಿಚಯ ಮಾಡಿಕೊಂಡರು.

ನಿರ್ಮಾಪಕ ಕೂಡಾ ಆಗಿದ್ದರು

ಅನಿಲ್ ಅನಿಲ್ ಬರೀ ಖಳನಟ ಮಾತ್ರವಲ್ಲದೆ ಒಂದು ಚಿತ್ರವನ್ನು ಕೂಡಾ ನಿರ್ಮಿಸಿದ್ದಾರೆ. ದುನಿಯಾ ವಿಜಯ್ ಅಭಿನಯಿಸಿದ್ದ ‘ಜಾಕ್ಸನ್’ ಚಿತ್ರದ ನಿರ್ಮಾಪಕರಲ್ಲಿ ಅನಿಲ್ ಕೂಡ ಒಬ್ಬರಾಗಿದ್ದರು.

ಪಾನಿಪುರಿ ಗರಡಿಯಲ್ಲಿ ಪಳಗಿದ್ದ ದೇಹ

ಅನಿಲ್ ಅವರ ದೇಹ ಅಷ್ಟೊಂದು ಫಿಟ್ ಆಗಲು ಪಾನಿಪುರಿ ಕಿಟ್ಟಿಯವರ ತರಬೇತಿಯೇ ಕಾರಣ. ದುನಿಯಾ ವಿಜಯ್ರ ಜಿಮ್ ಟ್ರೈನರ್ ಆಗಿದ್ದರು ಪಾನಿಪುರಿ ಕಿಟಿ. ‘ಕಟ್ಟುಮಸ್ತಾದ ದೇಹಕ್ಕಾಗಿ ಅನಿಲ್ ದಿನಾ 7ಘಂಟೆ ವ್ಯಾಯಾಮ ಮಾಡುತ್ತಿದ್ದರು.

 ಮಾಸ್ತಿಗುಡಿಯ ಮುಖ್ಯ ಖಳನಾಯಕ

ಸುಮಾರು 26 ಚಿತ್ರಗಳನ್ನ ಮಾಡಿದ್ದರೂ, ದೃಶ್ಯವೊಂದರಲ್ಲಿ ಅಥವಾ ಮುಖ್ಯ ಖಳನಟರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿಲ್ಗೆ ‘ಮಾಸ್ತಿಗುಡಿ’ಯಲ್ಲಿ ಮುಖ್ಯ ಪಾತ್ರವೇ ಸಿಕ್ಕಿತ್ತು. ಈ ಚಿತ್ರದಲ್ಲಿ ಇಬ್ಬರು ಮುಖ್ಯ ಖಳನಾಯಕರು. ಇನ್ನೊಬ್ಬ ಉದಯೋನ್ಮುಖ ನಟ ಉದಯ್ ಅವರು ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಹತ್ತು ತಿಂಗಳ ಸಿದ್ಧತೆ

‘ಮಾಸ್ತಿ ಗುಡಿ’ ಸಿನಿಮಾದಲ್ಲಿ ಪ್ರಮುಖ ಖಳ ಪಾತ್ರನಾಗುವ ಅವಕಾಶ ಪಡೆದಿದ್ದ ಅನಿಲ್ ಈ ಚಿತ್ರಕ್ಕಾಗಿ ಸುಮಾರು 10 ತಿಂಗಳುಗಳಿಂದ ತನ್ನ ಸಮಯ, ಸಾಮರ್ಥ್ಯವನ್ನೆಲ್ಲ ಪಣಕ್ಕಿಟ್ಟು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು.

ವಿಜಯ್‌ರ ಎಲ್ಲ ಸಿನಿಮಾಗಳಲ್ಲಿ ಖಾಯಂ

ವಿಜಯ್ ಜೊತೆ ’ದುನಿಯಾ’ದಿಂದ ‘ಮಾಸ್ತಿಗುಡಿ’ ದುನಿಯಾ ವಿಜಯ್ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಅನಿಲ್ ಕಾಣಿಸಿಕೊಂಡಿದ್ದಾರೆ. ‘ದುನಿಯಾ’ ಚಿತ್ರದಿಂದ ಹಿಡಿದು ‘ಜಂಗ್ಲಿ’ ‘ವೀರಬಾಹು’ ‘ಜಾಕ್ಸನ್’ ಕೊನೆಯದಾಗಿ ‘ಮಾಸ್ತಿಗುಡಿ.

ಯಶ್ ಜೊತೆ ಮೂರು ಸಿನಿಮಾಗಳು

ರಾಕಿಂಗ್ ಸ್ಟಾರ್ ಯಶ್‌ಅವರ ಮೂರು ಚಿತ್ರಗಳಲ್ಲಿ ಅನಿಲ್ ಕಾಣಿಸಿಕೊಂಡಿದ್ದರು.ಚಿಕ್ಕ ಪಾತ್ರಗಳಾದರೂ ಅನಿಲ್ ತನ್ನ ಖದರ್ ತೋರಿಸಿದ್ದರು. ’ಮಾಸ್ಟರ್ ಪೀಸ್’, ’ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಹಾಗೂ ಇತ್ತೀಚಿಗೆ ತೆರೆಕಂಡ ‘ಸಂತು ಸ್ಟ್ರೈಟ್ ಫಾರ್ವಾರ್ಡ್’ ಚಿತ್ರಗಳಲ್ಲೂ ಅನಿಲ್ ನಟಿಸಿದ್ದರು.

ಹಲವು ಸಿನಿಮಾಗಳ ಕೈಯಲ್ಲಿದ್ದವು

ಇತ್ತೀಚಿಗೆ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಚಿತ್ರದ ಶೂಟಿಂಗ್ ಮುಗಿಸಿದ್ದ ಅನಿಲ್, ಪುನೀತ್ ರಾಜ್‌ಕುಮಾರ್ ಅವರ ‘ರಾಜಕುಮಾರ’ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು .ಅದರ ಜೊತೆ ಸುದೀಪ್ ಅವರ ‘ಹೆಬ್ಬುಲಿ’ ಚಿತ್ರದಲ್ಲೂ ನಟಿಸಬೇಕಿತ್ತು. ಉಳಿದಂತೆ ದೊಡ್ಡ ಸ್ಟಾರ್‌ಗಳ ಚಿತ್ರಗಳು ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಅನಿಲ್ ಅವರ ಕೈಯಲ್ಲಿದ್ದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X