ಹಾಂಗ್‌ಕಾಂಗ್ ಸಂಸದರ ಪ್ರಮಾಣವಚನ ತಡೆಹಿಡಿದ ಚೀನಾ

ಬೀಜಿಂಗ್, ನ. 8: ಸ್ವಾತಂತ್ರ್ಯದ ಬೆಂಬಲಿಗರಾದ ಇಬ್ಬರು ಪಾರ್ಲಿಮೆಂಟ್ ಸದಸ್ಯರು ಪ್ರಮಾಣವಚನ ಸ್ವೀಕರಿಸದಂತೆ ಚೀನಾ ತಡೆದಿದೆ ಎಂದು ವರದಿಯಾಗಿದೆ. ಪ್ರಮಾಣವಚನ ಮಾಡಲು ಸಿಕ್ಕಿದ್ದ ಮೊದಲ ಸಂದರ್ಭದಲ್ಲಿ ವಾಕ್ಯಗಳನ್ನು ಮನಪೂರ್ವಕ ತಪ್ಪಾಗಿ ಓದಿದ್ದಾರೆಂದು ಆರೋಪಿಸಿ ಚೀನ ಈ ಕ್ರಮಕ್ಕೆ ಮುಂದಾಗಿದೆ.
ಚೀನಾದ ನಿಯಂತ್ರಣದಲ್ಲಿರುವ ಹಾಂಕಾಂಗ್‌ನ್ನು ಸ್ವತಂತ್ರಗೊಳಿಸಬೇಕೆಂದು ಇಬ್ಬರು ಸಂಸದರು ವಾದಿಸುತ್ತಿದ್ದಾರೆ. ಈ ಹಿಂದೆ ಚೀನಾದ ವಿರುದ್ಧ ಪ್ರತಿಭಟನೆಯಲ್ಲಿ ಇವರಿಬ್ಬರೂ ಭಾಗವಹಿಸಿದ್ದರು. ಚೀನಾ ಇಬ್ಬರ ವಿರುದ್ಧ ವಿಧಿಸಿದ ನಿಷೇಧವನ್ನು ಜಾರಿಗೊಳಿಸಲಾಗುವುದು ಎಂದು ಹಾಂಕಾಂಗ್ ಅಧಿಕಾರಿಗಳು ಹೇಳಿದ್ದಾರೆ. ಚೀನಾದ ಕಾನೂನು ಅನುಸರಿಸಲು ನಾವು ಬಾಧ್ಯಸ್ಥರಾಗಿದ್ದು, ದೇಶದ ಒಗ್ಗಟ್ಟು ಸುರಕ್ಷೆ ಯನ್ನು ಬಲಪಡಿಸುವುದು ಅಗತ್ಯವಾಗಿದೆ ಎಂದು ಹಾಂಕಾಂಗ್ ಚೀಫ್ ಎಕ್ಸಿಕ್ಯೂಟಿವ್ ಹೇಳಿದ್ದಾರೆ. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಹಾಂಕಾಂಗ್ ಸ್ವಾತಂತ್ರ್ಯದ ಬೆಂಬಲಿಗರಾದ ಇಬ್ಬರು ಸಂಸದರಾಗಿ ಆಯ್ಕೆಯಾದದ್ದು ಚೀನಾವನ್ನು ಕಂಗೆಡಿಸಿದೆ ಎಂದು ವರದಿ ತಿಳಿಸಿದೆ.





