ಉಡುಪಿ ಯುಬಿಎಂ ಚರ್ಚ್‌ಗೆ ಗೃಹಸಚಿವ ಪರಮೇಶ್ವರ್ ಭೇಟಿ

ಉಡುಪಿ, ನ.8: ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಸೋಮವಾರ ಉಡುಪಿ ಯುನೈಟೆಡ್ ಬಾಸೆಲ್ ಮಿಷನ್ ಚರ್ಚಿಗೆ ಭೇಟಿ ನೀಡಿದರು.
ಚರ್ಚಿಗೆ ಭೇಟಿ ನೀಡಿದ ಗೃಹಸಚಿವರನ್ನು ಬಾಸೆಲ್ ಮಿಷನ್ ಆಡಳಿತ ಮಂಡಳಿಯ ವತಿಯಿಂದ ಹಾರ್ದಿಕವಾಗಿ ಸ್ವಾಗತಿಸಿ, ಪ್ರಾರ್ಥನಾ ವಿಧಿಯನ್ನು ನಡೆಸಲಾಯಿತು. ಈ ವೇಳೆ ಸಚಿವರನ್ನು ಚರ್ಚಿನ ವತಿಯಿಂದ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್, ಸಮಾಜಕ್ಕೆ ಬಾಸೆಲ್ ಮಿಷನರಿಗಳು ನೀಡಿದ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಸೇವೆಗಳನ್ನು ಕೊಂಡಾಡಿದರು. ಅಲ್ಲದೆ ಬಾಸೆಲ್ ಮಿಷನರಿಗಳ ಸೇವೆಯ ಸ್ಮರಣಾರ್ಥ ನಿರ್ಮಿಸಲಾಗಿರುವ ಸಭಾಭವನಕ್ಕೆ ರಾಜ್ಯ ಸರಕಾರದ ಅಲ್ಪಸಂಖ್ಯಾತ ಇಲಾಖೆಯಿಂದ ಒಂದು ಕೋಟಿ ಅನುದಾನವನ್ನು ನೀಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ್ ಐವನ್ ಡಿಸೋಜ, ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧಕ್ಷ ಎಂ.ಎ.ಗಫೂರ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಯುಬಿಎಂ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಜಯ ಪ್ರಕಾಶ್ ಸೈಮನ್ಸ್, ಕಾರ್ಯದರ್ಶಿ ಸದಾನಂದ ಕಾಂಚನ್, ಕೋಶಾಧಿಕಾರಿ ಗ್ಲಾಡಸನ್ ಸಾಲಿನ್ಸ್, ಸದಸ್ಯರಾದ ಪ್ರೆಸ್ಸಿ ಸೋನ್ಸ್, ವಿನೋದ್ ಜತ್ತನ್ನ, ಸ್ಟೀವನ್ ರೊನಾಲ್ಡ್, ಗ್ಲೆನ್ ಜತ್ತನ್ನ, ವಂ.ಪ್ರಮೋದ್ ಗೋನಿ, ವಂ ಮದಲಗಿ, ವಂ.ಕುಮಾರ್ ಸಾಲಿನ್ಸ್, ಬಿಗ್ ಜೆ ನೆಟ್‌ವರ್ಕ್ ನಿರ್ದೇಶಕ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.







