ದುಬೈ ಕಟ್ಟಡದಿಂದ ಹಾರಿ ಭಾರತೀಯ ವ್ಯಕ್ತಿ ಸಾವು

ದುಬೈ, ನ. 8 : ಇಲ್ಲಿನ ಅಲ್ ಕಿಸೈಸ್ ಪ್ರದೇಶದಲ್ಲಿರುವ ಬಹುಮಹಡಿ ಕಟ್ಟಡವೊಂದರ ಕಸದ ಡಬ್ಬಿಯ ಸಮೀಪ ಭಾರತೀಯ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಆತ ಆ ಕಟ್ಟಡದ ಹತ್ತನೇ ಮಹಡಿಯಿಂದ ಕೆಳಗೆ ಹಾಗಿ ಆತ್ಮಹತ್ಯೆ ಮಾಡಿದ್ದಾನೆಂದು ಶಂಕಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ.
ಮೃತ ವ್ಯಕ್ತಿಯನ್ನು ಅರುಣ್ ಕುಮಾರ್ ಎಂದು ಗುರುತಿಸಲಾಗಿದ್ದು ದಕ್ಷಿಣ ಭಾರತದ ವ್ಯಕ್ತಿ ಎಂದು ಹೇಳಲಾಗಿದೆ. ಈತ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ತನ್ನ ರೂಮ್ ಮೇಟ್ ಗಳಿಗೆ ಹೇಳಿದ್ದ ಎನ್ನಲಾಗಿದೆ.
ಇಲ್ಲಿನ ಗ್ರ್ಯಾನ್ಡ್ ಹೋಟೆಲ್ ಸಮೀಪದ ಟವರ್ ಸಿಕ್ಸ್ ಕಟ್ಟಡದ ಹತ್ತನೇ ಮಹಡಿಯಲ್ಲಿ ವಾಸವಾಗಿದ್ದ ಈತನ ಶವವನ್ನು ಸ್ವಚ್ಛತಾ ಸಿಬ್ಬಂದಿ ನೋಡಿದ್ದಾರೆ.
Next Story





