ಸಂಸದ ಕೀರ್ತಿ ಆಝಾದ್‌ರ ಪತ್ನಿ ಆಮ್ ಆದ್ಮಿ ಪಕ್ಷಕ್ಕೆ

ಹೊಸದಿಲ್ಲಿ, ನ.8: ಅಮಾನತಾಗಿರುವ ಬಿಜೆಪಿ ಸಂಸದ ಕೀರ್ತಿ ಆಝಾದ್‌ರ ಪತ್ನಿ ಪೂನಂ ಆಝಾದ್, ನ.13ರಂದು ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸೇರಲಿದ್ದಾರೆ.
ನ.13ರಂದು ಪೂನಂ ಅಧಿಕೃತವಾಗಿ ಎಎಪಿ ಸೇರಲಿದ್ದಾರೆಂದು ಪಕ್ಷದ ನಾಯಕ ಸಂಜಯ ಸಿಂಗ್ ತಿಳಿಸಿದ್ದಾರೆ.
2003ರಲ್ಲಿ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪೂನಂ, ಸದ್ಯ ಬಿಜೆಪಿ ದಿಲ್ಲಿ ಘಟಕದ ವಕ್ತಾರೆಯಾಗಿದ್ದಾರೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿರುವ ಪೂನಂ ಎಎಪಿಗೆ ಸೇರಿದ ಬಳಿಕ ಎಲ್ಲ ಹೇಳುವೆನೆಂದಿದ್ದಾರೆ.
Next Story





