ಚಿತ್ರ ತಂಡದ ನಿರ್ಲಕ್ಷ ಕಾರಣ: ಸಿದ್ದರಾಮಯ್ಯ
‘ಮಾಸ್ತಿಗುಡಿ’ ದುರಂತ

ಬೆಂಗಳೂರು, ನ.8: ನಗರದ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ‘ಮಾಸ್ತಿಗುಡಿ’ ಚಿತ್ರೀಕರಣ ವೇಳೆ ಉದಯೋನ್ಮುಖ ನಟರಿಬ್ಬರು ಹೆಲಿಕಾಪ್ಟರ್‌ನಿಂದ ಕೆರೆಗೆ ಜಿಗಿದು ಪ್ರಾಣ ಕಳೆದು ಕೊಂಡ ಘಟನೆ ದುರದೃಷ್ಟಕರ ಎಂದಿ ರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಸ್ತಿಗುಡಿ ದುರಂತದಲ್ಲಿ ಮೇಲ್ನೋ ಟಕ್ಕೆ ಚಿತ್ರ ತಂಡದ ನಿರ್ಲಕ್ಷತೆ ಎದ್ದು ಕಾಣುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದ ಅವರು, ಈಜು ಬಾರದವ ರನ್ನು ಕೆರೆಗೆ ಹಾರುವ ಸಾಹಸಕ್ಕೆ ಬಳಸಿಕೊಂಡ ಬಗ್ಗೆ ಸೋಜಿಗ ವಾಗುತ್ತದೆ. ಇಂತಹ ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭಗಳಲ್ಲೂ ಸೂಕ್ತ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳದೆ ಇರುವುದು ಚಿತ್ರೀಕರಣ ತಂಡದ ಪ್ರಾಥಮಿಕ ವೈಫಲ್ಯ ಎಂದರು.ಲಾಶಯದಲ್ಲಿ ಹಿನ್ನೀರಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಯಾವುದೇ ತಪ್ಪಿಲ್ಲ. ಆದರೆ, ಚಿತ್ರತಂಡ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದ ಹಿನ್ನೆಲೆ ಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.





