ಶಾಂತಿಗೆ ಭಂಗ ತಂದರೆ ಕಠಿಣ ಕ್ರಮ: ಸಿಎಂ ಎಚ್ಚರಿಕೆ
ನ.28ರಂದು ಬೆಂಗಳೂರು ಐಟಿಇಬಿಝ್‌ಗೆ ಚಾಲನೆ
ಬೆಂಗಳೂರು, ನ.8: ಡಿಜಿಟಲ್ ಪರಿಹಾರಗಳ ಮಾರುಕಟ್ಟೆಯೊಂದರ ಭಾಗವಾಗಿರಲು ಹಾಗೂ ತಮ್ಮ ಗ್ರಾಹಕರಿಗೆ ಉತ್ಸಾಹಭರಿತ ಅನುಭವ ಸೃಜಿಸಲು ಉದ್ದಿಮೆಗಳ ವೇದಿಕೆಯನ್ನು ಈ ‘ಬೆಂಗಳೂರು ಐಟಿಇ.ಬಿಝ್’ ಒದಗಿಸುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಐಟಿಇಬಿಝ್ ಉದ್ಘಾಟನಾ ಪೂರ್ವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಂಗಳೂರು ಅರಮನೆಯಲ್ಲಿ ನ.28 ರಿಂದ 30ರವರೆಗೆ ನಡೆಯಲಿರುವ ಈ ಮೇಳವನ್ನು ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರ ಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಬೆಂಗಳೂರಿನ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಆಯೋಜಿ ಸಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರವು ಐಟಿ ರಫ್ತಿನಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ವಿಶ್ವದ ಎರಡನೆ ಬೃಹತ್ ತಂತ್ರಜ್ಞಾನದ ತಾಣವಾಗಿ ಹೊರಹೊಮ್ಮಿದೆ. ಬಹುರಾಷ್ಟ್ರೀಯ ಕಂಪೆನಿಗಳೂ ಸೇರಿದಂತೆ ಅನೇಕ ಕಂಪೆನಿಗಳು, ನವೀನ ಮಾದರಿಯ ತೀವ್ರವೇಗದ ತಂತ್ರಜ್ಞಾನ ಆವಿಷ್ಕಾರಗಳಿಗೆ ಒತ್ತು ನೀಡಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರವು ಮುಂಚೂಣಿಯಲ್ಲಿರುವ ನಾವೀನ್ಯತೆಯ ತಾಣವಾಗಿದ್ದು, 4 ಸಾವಿರಕ್ಕೂ ಹೆಚ್ಚಿನ ಸಕ್ರಿಯ ತಾಂತ್ರಿಕ ನವೋದ್ಯಮಗಳ ತವರಾಗಿದೆ. ವಿಶ್ವದ 20 ಅತ್ಯುತ್ತಮ ನವೋದ್ಯಮಗಳನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಸೇರಿರುವುದು ಹೆಮ್ಮೆಯ ಸಂಗತಿ ಎಂದು ಪ್ರಿಯಾಂಕ್‌ಖರ್ಗೆ ಹೇಳಿದರು.ಚ್ಟಐಟಿ, ಐಟಿಇಎಸ್, ಇಎಸ್‌ಡಿಎಂ ಕ್ಷೇತ್ರಗಳಿಗೆ ನೀತಿ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಯನ್ನು ಬೆಂಬಲಿಸುವ ಪ್ರಮುಖ ಪಾತ್ರವನ್ನಷ್ಟೇ ಎಸ್‌ಟಿಪಿಐ ವಹಿಸುತ್ತಿರುವುದಲ್ಲದೆ, ವಿವಿಧ ತಂತ್ರಜ್ಞಾನ ಮತ್ತು ಸಂವಹನ ಸೇವೆಗಳಾದ ಅಂತರ್ಜಾಲ, ದತ್ತಾಂಶ ಕೇಂದ್ರ, ತಂತ್ರಜ್ಞಾನ ಸಮಾಲೋಚನೆಗಳನ್ನು ಏರ್ಪಡಿಸುವುದು, ಐಟಿ ಭದ್ರತೆ, ಇ-ಆಡಳಿತಕ್ಕಾಗಿ ಬೆಂಬಲವು ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 10 ಲಕ್ಷ ನೇರ ಹಾಗೂ 30 ಲಕ್ಷ ಪರೋಕ್ಷ ಉದ್ಯೋಗಗಳು ಲಭ್ಯವಾಗಿದೆ. ಪರಸ್ಪರ ಏಳಿಗೆ ಮತ್ತು ಉಪಯೋಗಕ್ಕಾಗಿ ಉಭಯ ರಾಷ್ಟ್ರಗಳ ಶೈಕ್ಷಣಿಕ ಕ್ಷೇತ್ರದ ಮತ್ತು ನೀತಿ ನಿರ್ಮಾತೃಗಳ ನಡುವೆ ಸಂಪರ್ಕ ಹೆಚ್ಚಿಸುವಲ್ಲಿ ಗಮನವಿಡುತ್ತಾ, ಯು.ಕೆ ಮತ್ತು ಕರ್ನಾಟಕಗಳ ನಾವೀನ್ಯತೆ ಮತ್ತು ತಂತ್ರಜ್ಞಾನದ ತಾಣಗಳ ನಡುವೆ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ತಂತ್ರಜ್ಞಾನ ನಾವೀನ್ಯತೆಯ ಮತ್ತು ನವೋದ್ಯಮವನ್ನು ಅದರಲ್ಲೂ ಹೊರಹೊ ಮ್ಮುತ್ತಿರುವ ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸಬೇಕಿದೆ. ನವೋದ್ಯಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಗುರಿಯಾಗಿಸಿಕೊಂಡು ರಾಜ್ಯ ಮತ್ತು ಯು.ಕೆ.ಗಳಲ್ಲಿನ ಆವಿಷ್ಕಾರಿಕ ಅವಕಾಶಗಳನ್ನು ಪರಸ್ಪರ ಬೆಂಬಲಿಸಿ ಬಲಪಡಿಸುವ ಒಡಂಬಡಿಕೆಯೊಂದಕ್ಕೆ ಸಹಿ ಹಾಕಲು ನಾವು ಉತ್ಸುಕವಾಗಿದ್ದೇವೆ ಎಂದು ಯು.ಕೆ.ನ ವ್ಯಾಪಾರ ಮತ್ತು ಹೂಡಿಕೆಯ ರಾಜ್ಯ ಸಚಿವ ಗ್ರೇಗ್‌ಹ್ಯಾಂಡ್ಸ್ ತಿಳಿಸಿದರು.ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ, ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







