Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟಿಪ್ಪುವಿನಿಂದ ಮತಾಂತರ: ಒಂದು ಸರಳ ತರ್ಕ

ಟಿಪ್ಪುವಿನಿಂದ ಮತಾಂತರ: ಒಂದು ಸರಳ ತರ್ಕ

ಇಸ್ಮತ್ ಪಜೀರ್ಇಸ್ಮತ್ ಪಜೀರ್9 Nov 2016 12:40 AM IST
share

ಟಿಪ್ಪು ಸುಲ್ತಾನರ ಮೇಲೆ ಬಲವಂತದ ಮತಾಂತರದ ಆರೋಪ ಇಂದು ನಿನ್ನೆಯದಲ್ಲ. ಅಂತೆಯೇ ಅದನ್ನು ನಿರಾಕರಿಸುವ ಎಡಪಂಥೀಯ ಒಲವಿನ ಮತ್ತು ಯಾವುದೇ ಪಂಥಗಳ ಸಂಕೋಲೆಯೊಳಗೆ ಬಂದಿಯಾಗದ ಇತಿಹಾಸಕಾರರ ಪ್ರತಿಪಾದನೆಯೂ ಇಂದು ನಿನ್ನೆಯದಲ್ಲ. ವಸಾಹತುಶಾಹಿಪರ ಇತಿಹಾಸ ಕಾರರ ಸುಳ್ಳಾರೋಪಗಳಿಗೆ ಅವರದ್ದೇ ವಸಾಹತು ಪ್ರಭುಗಳ ಜನಗಣತಿಯ ಆಧಾರಗಳನ್ನನುಸರಿಸಿ ಹಲವು ಇತಿಹಾಸಕಾರರು ದಾಖಲೆ ನೀಡಿದ್ದಾರೆ. ಅವುಗಳೆಲ್ಲವೂ ಜನಸಾಮಾನ್ಯರ ಆಲೋಚನೆಗೆ ಸರಳವಾಗಿ ನಿಲುಕುವಂತಹವುಗಳು. ಅಲ್ಲೆಲ್ಲೂ ಇತಿಹಾಸ ಮಂಡನೆಯ ನಿರ್ದಿಷ್ಟ ಸಿದ್ಧಾಂತದ ಭಾರವೂ ಇಲ್ಲ. ಅದರ ಮೇಲೆ ಒಂದು ಪಕ್ಷಿನೋಟ ಬೀರೋಣ.
ಮಾರ್ಕ್ ವಿಲ್ಕ್ಸ್ ಎಂಬ ವಸಾಹತುಶಾಹಿಗಳ ಇತಿಹಾಸಕಾರ ತನ್ನ ಖಛಿಠ್ಚಿಛಿ ಟ್ಛ ಖಟ್ಠಠಿ ಐ್ಞಜಿಚ್ಞ ಏಜಿಠಿಟ್ಟ ಎಂಬ ಗ್ರಂಥದಲ್ಲಿ ‘‘ಟಿಪ್ಪುಸುಲ್ತಾನ್ ಕೊಡಗಿನಲ್ಲಿ 70,000 ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ’’ ಎಂದು ಆಪಾದಿಸಿದ್ದಾನೆ. ಬಿ.ಎಲ್.ರೈಸ್ ಎಂಬ ಇನ್ನೋರ್ವ ವಸಾಹತುಶಾಹಿಪರ ಇತಿಹಾಸಕಾರ ಮೈಸೂರು ಗೆಜೆಟಿ ಯರ್‌ವೊಂದರಲ್ಲಿ ‘‘ಟಿಪ್ಪು ಸುಲ್ತಾನ್ 85,000 ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ’’ ಎಂದು ಆರೋಪಿಸಿದ್ದಾನೆ. ಇಲ್ಲೇ ಒಂದು ವ್ಯತ್ಯಾಸ ಗಮನಿಸಿ. ಇವರೀರ್ವರು ನೀಡುವ ಸಂಖ್ಯೆಗಳಲ್ಲಿ 15,000ದಷ್ಟು ಬೃಹತ್ ಅಂತರವಿದೆ. ಟಿಪ್ಪುಹುತಾತ್ಮರಾಗಿದ್ದು 1799ರಲ್ಲಿ. 1836ರಲ್ಲಿ ಅಂದರೆ ಟಿಪ್ಪುಹುತಾತ್ಮರಾಗಿ 37 ವರ್ಷಗಳ ಬಳಿಕ ಬ್ರಿಟಿಷ್ ವಸಾಹತುಶಾಹಿ ಪ್ರಭುಗಳೇ ನಡೆಸಿದ ಜನಗಣತಿ ವರದಿಯ ಪ್ರಕಾರ 1936ರಲ್ಲಿ ಕೊಡಗಿನ ಒಟ್ಟು ಜನಸಂಖ್ಯೆ 65,437. 37 ವರ್ಷಗಳ ಹಿಂದೆ ಸಹಜವಾಗಿಯೇ ಜನಸಂಖ್ಯೆ ಕಡಿಮೆ ಇರುತ್ತದೆಯೇ ಹೊರತು ಹೆಚ್ಚಿರುವುದಿಲ್ಲ. ಇರುವ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರನ್ನು ಹೇಗೆ ಮತಾಂತರಗೊಳಿಸಲು ಸಾಧ್ಯ? ವಾದಕ್ಕೆ ಅಷ್ಟೂ ಸಂಖ್ಯೆಯ ಜನರನ್ನೂ ಟಿಪ್ಪುಮತಾಂತರಿಸಿದ್ದಾರೆಂದು ಇಟ್ಟುಕೊಳ್ಳೋಣ. ಟಿಪ್ಪುವಿನ ಆಡಳಿತ 1799 ಮೇ ನಾಲ್ಕರಂದು ಟಿಪ್ಪು ಹುತಾತ್ಮರಾಗುವುದರೊಂದಿಗೆ ಮುಗಿಯುತ್ತದೆ. ಬಲಾತ್ಕಾರವಾಗಿ ಮತಾಂತರಗೊಂಡವರು ಆ ಬಳಿಕ ಅಂದರೆ ಓರ್ವ ಹಿಂದೂ ಅರಸನ ಕಾಲದಲ್ಲಿ ಮರು ಮತಾಂತರವಾಗಬಹುದಿತ್ತಲ್ಲ. ಹಾಗೆ ಸಾಮೂಹಿಕವಾಗಿ ಮರು ಮತಾಂತರಗೊಂಡ ಏಕೈಕ ನಿದರ್ಶನವನ್ನಾದರೂ ಇಂದು ಟಿಪ್ಪುವಿನ ಮೇಲೆ ಮತಾಂತರದ ಆರೋಪ ಹೊರಿಸುವವರು ತೋರಿಸಲಿ.
ಇನ್ನು ಮಂಗಳೂರು ಕ್ರೈಸ್ತರ ಮತಾಂತರದ ಕುರಿತಂತೆ ನೋಡೋಣ. ಫಾದರ್ ಮಿರಾಂಡ ಎಂಬವರು ‘‘ಟಿಪ್ಪು60,000 ಕ್ರೈಸ್ತರನ್ನು ಬಲವಂತ ವಾಗಿ ಇಸ್ಲಾಂಗೆ ಮತಾಂತರಿಸಿದ’’ ಎಂದು ಆಪಾದಿಸುತ್ತಾರೆ. ಇನ್ನೊಂದೆಡೆ ಆತ ಹೀಗೆ ಆಪಾದಿಸುತ್ತಾರೆ ‘‘ಟಿಪ್ಪು40,000 ಕ್ರೈಸ್ತರನ್ನು ಮಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಮತಾಂತರಿಸಿದ್ದಾನೆ. ಅವರಲ್ಲಿ 15,000 ಕ್ರೈಸ್ತರು ವಾಪಸು ಮಂಗಳೂರಿಗೆ ಬಂದಿದ್ದಾರೆ.’’ 1894ರಲ್ಲಿ ಬ್ರಿಟಿಷ್ ವಸಾಹತುಶಾಹಿಗಳೇ ರಚಿಸಿದ ‘ಮದ್ರಾಸ್ ಮ್ಯಾನ್ಯುವಲ್’ ಎಂಬ ಗ್ರಂಥದ ‘ಸೌತ್ ಕೆನರಾ ಗೆಜೆಟಿಯರ್’ ಎಂಬ ಉಪಶೀರ್ಷಿಕೆಯ ಭಾಗದಲ್ಲಿ 1890ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆ 70,000. ಹಾಗಿದ್ದರೆ ಸುಮಾರು ನೂರು ವರ್ಷಗಳ ಹಿಂದೆ ಮಂಗಳೂರಿನ ಒಟ್ಟು ಜನಸಂಖ್ಯೆಯೆ ಷ್ಟಿರಬಹುದು. ಅದರಲ್ಲಿ ಕ್ರೈಸ್ತರೆಷ್ಟಿದ್ದಿರಬಹುದು ಎಂದು ಊಹಿಸಿ ನೋಡಿ. ಟಿಪ್ಪುವಿನ ಕಾಲಾನಂತರ ಮಂಗಳೂರಿನಲ್ಲೂ ಕೂಡಾ ಕ್ರೈಸ್ತ ಧರ್ಮಕ್ಕೆ ಸಾಮೂಹಿಕ ಮರು ಮತಾಂತರಗೊಂಡ ಏಕೈಕ ನಿದರ್ಶನವೂ ಇಲ್ಲ.
ಇನ್ನೊಂದು ಸರಳ ತರ್ಕವನ್ನು ನೋಡೋಣ. ಓರ್ವ ಮುಸ್ಲಿಮೇತರ ಇಸ್ಲಾಂಗೆ ಮತಾಂತರವಾಗಬೇಕೆಂದರೆ ಆತ ವಾಚಾ ಮತ್ತು ಮನಸಾ ‘‘ಅಶ್‌ಹದು ಅನ್‌ಲಾಇಲಾಹ ಇಲ್ಲಲ್ಲಾಹ್ ವಅಶ್‌ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್’’ (ಅಲ್ಲಾಹನಲ್ಲದೇ ಅನ್ಯ ಆರಾಧ್ಯರಿಲ್ಲ ಮತ್ತು ಮುಹಮ್ಮದ್(ಸ)ರು ಅಲ್ಲಾಹನ ಸಂದೇಶವಾಹಕರು) ಎಂದು ಹೇಳಬೇಕು ಮತ್ತು ಮನಸಾರೆ ಒಪ್ಪಿಕೊಳ್ಳಬೇಕು. ಒಬ್ಬ ವ್ಯಕ್ತಿ ಜೀವಭಯದಿಂದ ಇದನ್ನು ಬಾಯಿಯಲ್ಲಿ ಉಚ್ಚರಿಸಬಹುದೇ ಹೊರತು ಮನಸಾರೆ ಒಪ್ಪಿಕೊಳ್ಳಲಾರ. ಮನಸಾರೆ ಒಪ್ಪಿಕೊಳ್ಳದಿದ್ದರೆ ಆತ ಮುಸ್ಲಿಂ ಆಗಲು ಸಾಧ್ಯವೇ ಇಲ್ಲ ಎನ್ನುವುದು ಇಸ್ಲಾಂನ ಬಗ್ಗೆ ಪ್ರಾಥಮಿಕ ಜ್ಞಾನವಿರುವವರಿಗೆ ನಿಲುಕುವ ಸರಳ ತರ್ಕ. ಇಂತಹ ಸರಳ ತರ್ಕವನ್ನು ಅರಿಯದಷ್ಟು ಹುಂಬರೇ ಟಿಪ್ಪುಸುಲ್ತಾನ್......?
ಟಿಪ್ಪು ಸುಲ್ತಾನರ ಮೇಲೆ 7,900 ಹಿಂದೂ ದೇವಾಲಯಗಳನ್ನು ಧ್ವಂಸಗೈದ ಆರೋಪವನ್ನು ಚಿದಾನಂದ ಮೂರ್ತಿಯಾದಿಯಾಗಿ ಮರಿ(ಕು)ಸಂಶೋಧಕರು ಹೊರಿಸುತ್ತಾ ಬಂದಿದ್ದಾರೆ. ಸುಮ್ಮನೆ ಒಂದು ಸರಳ ತರ್ಕ ನೋಡೋಣ. ಟಿಪ್ಪುವಿನ ಒಟ್ಟು ಆಡಳಿತಾವಧಿ 17 ವರ್ಷ ಅಂದರೆ 365್ಡ  

17=6205 ದಿನಗಳು. ದಿನಕ್ಕೊಂದು ದೇವಾಲಯವನ್ನು ನಾಶಪಡಿಸಿದರೂ 6205 ದೇವಾಲಯಗಳಾಗುತ್ತದೆ. ಉಳಿದ ಏಳು ನೂರು ಚಿಲ್ಲರೆ ದೇವಾಲಯಗಳನ್ನು ಟಿಪ್ಪುಯಾವಾಗ ನಾಶಪಡಿಸಿದರು? ಟಿಪ್ಪುವಿಗೆ ದೇವಾಲಯ ನಾಶಪಡಿಸುವುದೊಂದೇ ಕೆಲಸವಿದ್ದುದೇ.....? ಟಿಪ್ಪುವಿಗೆ ಬೇರೇನೂ ಕೆಲಸವಿರಲಿಲ್ಲವೇ....? ಟಿಪ್ಪು ಬ್ರಿಟಿಷರೊಂದಿಗೆ ನಾಲ್ಕು ಬಾರಿ ಯುದ್ಧ ಮಾಡಿದ್ದು, ಮರಾಠಾ, ನಿಜಾಮ ಮುಂತಾದವರೊಂದಿಗೆ ಯುದ್ಧ, ದಂಗೆ ಎದ್ದ ರಾಜ್ಯದ್ರೋಹಿಗಳನ್ನು ನೋಡಿಕೊಂಡದ್ದು, ಅಸಂಖ್ಯ ಅಭಿವೃದ್ಧಿ, ಜನಕಲ್ಯಾಣ ಕೆಲಸ ಮಾಡಿದ್ದು, ಕುಟುಂಬದೊಂದಿಗೆ ಕಳೆದದ್ದು, ಆಡಳಿತ ನಡೆಸಿದ್ದೆಲ್ಲಾ ಯಾವಾಗ ಎಂದು ಬಲ್ಲವರು ತಿಳಿಸುವರೇ.....?

ಮಾಹಿತಿ: ಡಾ ಬಾರ್ಕೂರು ಉದಯ

share
ಇಸ್ಮತ್ ಪಜೀರ್
ಇಸ್ಮತ್ ಪಜೀರ್
Next Story
X