ಕಾಂಗೊದಲ್ಲಿ ಸ್ಫೋಟ 32 ಭಾರತೀಯ ಶಾಂತಿಪಾಲಕರಿಗೆ ಗಾಯ
ಕಿನ್‌ಶಾಸ, ನ. 8: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ದೇಶದ ಗೋಮ ನಗರದಲ್ಲಿ ಮಂಗಳವಾರ ನಡೆದ ಸ್ಫೋಟದಲ್ಲಿ ಒಂದು ಮಗು ಮೃತಪಟ್ಟಿದೆ ಹಾಗೂ ಭಾರತೀಯ ಶಾಂತಿಪಾಲನಾ ಪಡೆಯ 32 ಸೈನಿಕರು ಗಾಯಗೊಂಡಿದ್ದಾರೆ ಎಂದು ಇಲ್ಲಿನ ವಿಶ್ವಸಂಸ್ಥೆ ಕಚೇರಿ ತಿಳಿಸಿದೆ.
ಗೋಮ ನಗರದ ಪಶ್ಚಿಮದ ಉಪನಗರ ಕಿಶೆರೊದಲ್ಲಿ ಸೈನಿಕರು ಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಮೂವರು ಶಾಂತಿಪಾಲನಾ ಪಡೆಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಮೀಪದ ಮಸೀದಿಯ ಇಮಾಮ್ ಒಬ್ಬರು ಹೇಳಿದ್ದಾರೆ.
ಕಾಂಗೊದಲ್ಲಿ ಸುಮಾರು 18,000 ಶಾಂತಿಪಾಲನಾ ಸೈನಿಕರು ಕರ್ತವ್ಯದಲ್ಲಿದ್ದಾರೆ. ಅಲ್ಲಿ 1996-2003ರ ಅವಧಿಯಲ್ಲಿ ನಡೆದ ಪ್ರಾದೇಶಿಕ ಸಂಘರ್ಷದಲ್ಲಿ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ.
Next Story





