ಹಿಲರಿ ವಿರುದ್ಧ ಟ್ರಂಪ್‌ಗೆ ಮುನ್ನಡೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ

ವಾಷಿಂಗ್ಟನ್, ನ.9: ಈ ಬಾರಿ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಅಮೆರಿಕ ಅಧ್ಯಕೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್(244 ಮತ) ಡೆಮಾಕ್ರಾಟಿಕ್ ಪಕ್ಷದ ಹಿಲರಿ ಕ್ಲಿಂಟನ್(215 ಮತ) ವಿರುದ್ಧ 29 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಲು ಒಟ್ಟು 270 ಮತಗಳ ಅಗತ್ಯವಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿಯಿಂದ ಅಮೆರಿಕದಾದ್ಯಂತ ಅಧ್ಯಕ್ಷೀಯ ಚುನಾವಣೆ ಆರಂಭವಾಗಿದ್ದು, ಬುಧವಾರ ಬೆಳಗ್ಗೆಯೂ ಮತದಾನ ಮುಂದುವರಿದಿದೆ.
.ಅಮೆರಿಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ 20 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದರು. ಅಮೆರಿಕದ 240 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ಇದೇ ಮೊದಲ ಬಾರಿಗೆ ಮಹಿಳೆಗೆ ಒಲಿಯಲಿದೆಯೇ? ಅಥವಾ ಶತಕೋಟ್ಯಧೀಶ ಉದ್ಯಮಿಗೆ ಒಲಿಯಲಿದೆಯೇ? ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.
ಒಹಿಯೊ, ಫ್ಲೋರಿಡಾ ಹಾಗೂ ನಾರ್ತ್ ಕ್ಯಾರೊಲಿನಾ ರಾಜ್ಯಗಳಲ್ಲಿನ ಚುನಾವಣೆ ಹೋರಾಟದಲ್ಲಿ ಜಯ ಸಾಧಿಸಿದ್ದ ಟ್ರಂಪ್ 69ರ ಪ್ರಾಯದ ಹಿಲರಿ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದ್ದರು.
ಭಾರತೀಯ ಸಂಜಾತ ಕಮಲಾ ಹ್ಯಾರಿಸ್ ಐತಿಹಾಸಿಕ ಜಯ:
ಭಾರತೀಯ ಸಂಜಾತ ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಈ ಬಾರಿಯ ಅಮೆರಿಕದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಯುಎಸ್ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲಿನಾಯ್ಸಾನಿಂದ ಇದೇ ಮೊದಲ ಬಾರಿ ಯುಎಸ್ ಕಾಂಗ್ರೆಸ್‌ಗೆ ಕೃಷ್ಣಮೂರ್ತಿ ಚುನಾಯಿತರಾಗಿದ್ದಾರೆ. ಹೊಸದಿಲ್ಲಿಯಲ್ಲಿ ಜನಿಸಿರುವ ಕೃಷ್ಣಮೂರ್ತಿ ಮೂರರ ಹರೆಯದಲ್ಲಿ ಹೆತ್ತವರೊಂದಿಗೆ ಅಮೆರಿಕಕ್ಕೆ ಬಂದಿದ್ದರು.
ಅಮೆರಿಕದಲ್ಲಿ ಶಾಲಾ ಶಿಕ್ಷಣ ಪಡೆದಿದ್ದ ಕೃಷ್ಣಮೂರ್ತಿ ಅಲ್ಲಿಯೇ ಮೆಕಾನಿಕಲ್ ಎಂಜಿನಿಯರಿಂಗ್ ಅಧ್ಯಯನ ನಡೆಸಿದ್ದರು.







