ಪ್ರಧಾನಿಯಿಂದ ಆರ್ಥಿಕ ತುರ್ತು ಪರಿಸ್ಥಿತಿ :ಕೇರಳ ಹಣಕಾಸು ಸಚಿವ

ತಿರುವನಂತಪುರಂ, ನ. 9: ಒಂದೇ ರಾತ್ರಿಯಲ್ಲಿ 500,1000 ರೂಪಾಯಿ ನೋಟುಗಳನ್ನು ನಿಷೇಧಿಸಿದ ಪ್ರಧಾನ ಮಂತ್ರಿಯ ಘೋಷಣೆ ಭಾರತದ ಅರ್ಥವ್ಯವಸ್ಥೆಯಲ್ಲಿ ಗಂಭೀರ ಪ್ರತ್ಯಾಘಾತಗಳಿಗೆ ಕಾರಣವಾಗಲಿದೆ ಎಂದು ಕೇರಳ ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ಪ್ರಧಾನಿ ಘೋಷಿಸಿದ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಕೇರಳ ಸಹಿತ ಇತರ ರಾಜ್ಯಗಳು ಹೇಗೆ ಎದುರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬುಧವಾರದಿಂದ ರಾಜ್ಯ ಸ್ತಂಭಿಸಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಸರಕಾರಕ್ಕೆ ಖಜಾನೆ ಮೂಲಕ ಯಾವುದೇ ವ್ಯವಹಾರವನ್ನು ಮಾಡಲು ಸಾಧ್ಯವಿಲ್ಲ. ಯಾರಿಗೂ ಒಂದು ನಯಾ ಪೈಸೆ ಕೂಡಾ ನೀಡಲು ಸಾಧ್ಯವೂ ಇಲ್ಲ. ಎಲ್ಲ ಕೆಲಸಕಾರ್ಯಗಳನ್ನು ನಿಲ್ಲಿಸಬೇಕಾದ ಅವಸ್ಥೆ ಎದುರಾಗಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆಂದು ವರದಿ ತಿಳಿಸಿದೆ.
Next Story





