ಆಸಿಡ್ ದಾಳಿಕೋರನ ಕಣ್ಣು ಕಿತ್ತ ಇರಾನ್

ನಾಲ್ಕು ವರ್ಷದ ಬಾಲಕಿಯ ಮೇಲೆ ಆಸಿಡ್ ಎರಚಿ ಆಕೆಯನ್ನು ಕುರುಡಾಗಿಸಿದ್ದಾನೆಂದು ಹೇಳಲಾದ ವ್ಯಕ್ತಿಯ ಕಣ್ಣುಗಳನ್ನು ತೆಗೆಯುವ ಶಿಕ್ಷೆಯನ್ನು ಇರಾನ್ ವಿಧಿಸಿದೆ. ಈ ವರ್ಷ ಎರಡನೇ ಬಾರಿ ಇರಾನ್ ಸೇಡಿಗೆ ಸೇಡು ಎನ್ನುವ ಶಿಕ್ಷೆಯನ್ನು ನೀಡಿರುವ ಪ್ರಕರಣ ದಾಖಲಾಗಿದೆ. ಇಸ್ಲಾಮಿಕ್ ಪ್ರಜಾಪ್ರಭುತ್ವದಲ್ಲಿ ಸೇಡಿಗೆ ಸೇಡು ಶಿಕ್ಷೆಗಳನ್ನು ವಿಧಿಸುವ ಅವಕಾಶವಿದೆ ಎಂದು ತೆಹ್ರಾನ್‌ನ ನ್ಯಾಯಾಂಗ ಕಚೇರಿಯ ಅಧ್ಯಕ್ಷ ಮುಹಮ್ಮದ್ ಶಹರಿಯಾರಿ ಹೇಳಿದ್ದಾರೆ.
"2009ರಲ್ಲಿ ಸನಂದಾಜ್ ಪ್ರಾಂತದಲ್ಲಿ ಈ ವ್ಯಕ್ತಿ ನಾಲ್ಕು ವರ್ಷದ ಬಾಲಕಿಯ ಮುಖಕ್ಕೆ ಆಸಿಡ್ ಎರಚಿಸದ್ದ. ಈ ಪ್ರಕರಣದಲ್ಲಿ ಬಾಲಕಿ ಕಣ್ಣು ಕಳೆದುಕೊಂಡಿದ್ದಳು. ಇಂದು ಕಾನೂನು ನನ್ನ ಸಮಮುಖದಲ್ಲಿ ಮತ್ತು ತಜ್ಞರ ಸಮ್ಮುಖದಲ್ಲಿ ಅದಕ್ಕೆ ಪ್ರತೀಕಾರ ಶಿಕ್ಷೆ ವಿಧಿಸಲು ನಿರ್ಧರಿಸಿದೆ" ಎಂದು ಮೊಹಮ್ಮದ್ ಹೇಳಿದ್ದಾರೆ.
ಪ್ರತೀಕಾರದ ಕಾನೂನು ಇಸ್ಲಾಂ ಶರಿಯಾ ನೀತಿ ಸಂಹಿತೆಯ ಕೇಂದ್ರ ಭಾಗವಾಗಿದೆ. ಆದರೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಮೂಹ ಈ ನೀತಿಯನ್ನು ಖಂಡಿಸಿದೆ.
ಸಂತ್ರಸ್ತರು ತಮ್ಮ ಮೇಲೆ ಅಪರಾಧ ಎಸಗಿದ ವ್ಯಕ್ತಿಯಿಂದ ಪರಿಹಾರದ ಮೊತ್ತವನ್ನು ಪಡೆದುಕೊಂಡು ಅವರಿಗೆ ಕ್ಷಮಾದಾನವನ್ನು ನೀಡುವ ಅವಕಾಶವೂ ಇದೆ. 2011ರಲ್ಲಿ ಆಸಿಡ್ ದಾಳಿಯಿಂದ ಕುರುಡಾಗಿದ್ದ ಯುವ ಇರಾನಿ ಮಹಿಳೆ ಅಮೇನಾಹ್ ಬಹ್ರಾಮಿ ಈ ಹಕ್ಕನ್ನು ಬಳಸಿಕೊಂಡಿದ್ದರು. ತಾನು ಅನುಭವಿಸಿದ ಯಾತನೆಯನ್ನು ದಾಳಿ ಮಾಡಿದಾತ ಅನುಭವಿಸುವುದು ಬೇಡ ಎಂದು ಕ್ಷಮಾದಾನ ಕೊಟ್ಟಿದ್ದಾಗಿ ಆಕೆ ಹೇಳಿದ್ದರು.
ಕೃಪೆ: www.khaleejtimes.com







