ಟ್ವಿಟರ್ ಪ್ರೊಫೈಲ್ ಪರಿಷ್ಕರಿಸಿದ ಟ್ರಂಪ್

ವಾಶಿಂಗ್ಟನ್, ನ. 9: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಬಳಿಕ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಬುಧವಾರ ತನ್ನ ಟ್ವಿಟರ್ ‘ಬಯೊ’ (ಸ್ವವಿವರ)ವನ್ನು ಪರಿಷ್ಕರಿಸಿದರು.
70 ವರ್ಷದ ರಿಯಲ್ ಎಸ್ಟೇಟ್ ವ್ಯಾಪಾರಿ 2009ರಿಂದಲೇ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. 2006ರಲ್ಲಿ ಮೈಕ್ರೊಬ್ಲಾಗಿಂಗ್ ಸೈಟ್ ಆರಂಭಗೊಂಡಿತ್ತು.
ಈಗ ಅವರು ತನ್ನ ಬಯೋವನ್ನು ‘ಪ್ರೆಸಿಡೆಂಟ್ ಇಲೆಕ್ಟ್ ಆಫ್ ದ ಯುನೈಟೆಡ್ ಸ್ಟೇಟ್ಸ್’ (ಅಮೆರಿಕದ ನಿಯೋಜಿತ ಅಧ್ಯಕ್ಷ) ಎಂಬುದಾಗಿ ಬದಲಿಸಿದ್ದಾರೆ.
ಅವರ ಟ್ವಿಟರ್ ಹ್ಯಾಂಡಲ್ (ಖಾತೆ) ‘@realDonaldTrump' ಸುಮಾರು 1.35 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದೆ. ಇದು ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮರಿಗಿಂತ 20 ಲಕ್ಷ ಅಧಿಕ.
Next Story





