Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜಗದೀಶ್ ಶೆಟ್ಟರ್, ಕಾರಜೋಳ ಕಣ್ಣಲ್ಲಿ...

ಜಗದೀಶ್ ಶೆಟ್ಟರ್, ಕಾರಜೋಳ ಕಣ್ಣಲ್ಲಿ ಟಿಪ್ಪು ಸುಲ್ತಾನ್

ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಸಚಿವರು ಟಿಪ್ಪು ಬಗ್ಗೆ ಏನು ಬರೆದಿದ್ದಾರೆ ನೋಡಿ

ವಾರ್ತಾಭಾರತಿವಾರ್ತಾಭಾರತಿ9 Nov 2016 8:12 PM IST
share
ಜಗದೀಶ್ ಶೆಟ್ಟರ್, ಕಾರಜೋಳ ಕಣ್ಣಲ್ಲಿ ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನ್ ಬಗೆ ಡಾ. ಬಿ. ಷೇಕ್ ಅಲಿ ಬರೆದಿರುವ ಪುಸ್ತಕ-'Tipu Sultan- a crusader for change' ಟಿಪ್ಪು ಇತಿಹಾಸದ ಕುರಿತಂತೆ ಅತ್ಯಂತ ಹೆಚ್ಚು ವಿಶ್ವಾಸಾರ್ಹ, ಮಹತ್ವದ ಸಂಶೋಧನಾ ಗ್ರಂಥ. ಟಿಪ್ಪು ಅಧ್ಯಯನಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕೃತಿಯನ್ನು ಬಳಸುತ್ತಾರೆ. ಕರ್ನಾಟಕ ಸರಕಾರ ಪ್ರಕಟಿಸಿರುವ ಈ ಕೃತಿಯಲ್ಲಿ ಅಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಮತ್ತು ಗೋವಿಂದ ಕಾರಜೋಳ ಟಿಪ್ಪು ಕುರಿತಂತೆ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಅದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಜಗದೀಶ್ ಶೆಟ್ಟರ್ .

ಮುಖ್ಯಮಂತ್ರಿಗಳು

ವಿಧಾನಸೌಧ, ಬೆಂಗಳೂರು

ಗೌರವಾನ್ವಿತ ಮುಖ್ಯಮಂತ್ರಿಗಳ ಸಂದೇಶ


ಕರ್ನಾಟಕ ಗೆಜೆಟ್ಟಿಯರ್ ಇಲಾಖೆಯು ಡಾ.ಬಿ.ಶೇಕ್ ಅಲಿ ಬರೆದಿರುವ ‘ಟಿಪ್ಪುಸುಲ್ತಾನ್- ಎ ಕ್ರುಸೇಡರ್ ಪಾರ್ ಚೇಂಜ್’ ಎಂಬ ಪ್ರಬಂಧ ಕೃತಿಯನ್ನು ಹೊರತರುವ ಯೋಜನೆ ಅತೀವ ಸಂತಸ ತಂದಿದೆ. 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೆ ವರ್ಷಾಚರಣೆ ಸಂದರ್ಭದಲ್ಲಿ ಈ ವಿಶೇಷ ಕೃತಿ ಪ್ರಕಾಶನಕ್ಕೆ ಮುಂದಾಗಿರುವುದು ಸಂತಸದ ವಿಚಾರ.


1782ರಿಂದ 1799ರ ಕಾಲಘಟ್ಟವನ್ನು ಒಳಗೊಳ್ಳುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ‘ಮೈಸೂರು ಸಾಮ್ರಾಜ್ಯದ ಹುಲಿ’ ಎಂದೇ ಕರೆಯುತ್ತಿದ್ದ ಟಿಪ್ಪು ಸುಲ್ತಾನ್ ವಹಿಸಿದ ಮಹತ್ವದ ಪಾತ್ರ ಗಮನಾರ್ಹ. ರಾಷ್ಟ್ರ ಸರಕಾರದ ಅವರ ಪರಿಕಲ್ಪನೆ, ಸರಕಾರಿ ಉದ್ದಿಮೆ ಕುರಿತ ಅವರ ವಿನೂತನ ಯೋಚನಾ ಲಹರಿ, ಅತ್ಯಾಧುನಿಕ ಮಿಲಿಟರಿ ಕೌಶಲಗಳು, ಸುಧಾರಣೆಗೆ ಇದ್ದ ತುಡಿತ ಇತ್ಯಾದಿಗಳು, ಅವರನ್ನು ವಯಸ್ಸಿಗೆ ಮೀರಿದ ಪ್ರಬುದ್ಧತೆಯ ವಿಶಿಷ್ಟ ನಾಯಕರನ್ನಾಗಿ ರೂಪಿಸಿದ್ದವು. ಈ ಎಲ್ಲ ಅಂಶಗಳು, ಗಜೆಟಿಯರ್ ಇಲಾಖೆ ಪ್ರಕಟಿಸಿದ ಕೃತಿಯಲ್ಲಿ ಸಮಗ್ರವಾಗಿ ಬಿಂಬಿತವಾಗಿವೆ.


ಆಕರ್ಷಕ ರೇಖಾಚಿತ್ರಗಳನ್ನೂ ಒಳಗೊಂಡಂತೆ ಈ ಪ್ರಬಂಧ ಕೃತಿಯನ್ನು ಯಶಸ್ವಿಯಾಗಿ ಹೊರತರುವಲ್ಲಿ ಮುತುವರ್ಜಿ ವಹಿಸಿದ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಕಾರ್ಯದರ್ಶಿ ಮತ್ತು ಕರ್ನಾಟಕ ಗಜೆಟಿಯರ್‌ನ ಪ್ರಧಾನ ಸಂಪಾದಕ ಬಸವರಾಜ್, ಐಎಎಸ್ ಹಾಗೂ ಶ್ರಮಿಸಿದ ಸಿಬ್ಬಂದಿಯನ್ನೂ ನಾನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ.

(ಜಗದೀಶ್ ಶೆಟ್ಟರ್)

ಗೋವಿಂದ ಕಾರಜೋಳ
ಮಾನ್ಯ ಸಚಿವರು
ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿಧಾನಸೌಧ, ಬೆಂಗಳೂರು

ಗೌರವಾನ್ವಿತ ಸಚಿವರಿಂದ ಶುಭಾಶಂಸನೆ

1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ಡಾ.ಶೇಕ್ ಅಲಿಯವರು ಬರೆದಿರುವ ‘ಟಿಪ್ಪು ಸುಲ್ತಾನ್- ಎ ಕ್ರುಸೇಡರ್ ಪಾರ್ ಚೇಂಜ್’ ಎಂಬ ಪ್ರಬಂಧ ಕೃತಿಯನ್ನು ಕರ್ನಾಟಕ ಗಜೆಟಿಯರ್ ಇಲಾಖೆ ಹೊರತರಲು ಮುಂದಾಗಿರುವುದು ಅತ್ಯಂತ ಹೆಮ್ಮೆಯ ವಿಚಾರ. ಇದಕ್ಕೆ ಕೇಂದ್ರ ಸರಕಾರ ಬಹಳ ಹಿಂದೆಯೇ ಹಣಕಾಸು ನೆರವು ನೀಡಿತ್ತು. ಈ ಕೃತಿಯು ಟಿಪ್ಪುಸುಲ್ತಾನ್‌ನ ಆಡಳಿತಾವಧಿಯಲ್ಲಿ (1782- 1799) ಸಾಧಿಸಿದ ಅಭಿವೃದ್ಧಿಯ ಎಲ್ಲ ಆಯಾಮಗಳನ್ನು ಒಳಗೊಂಡಿದೆ.


ಕರ್ನಾಟಕ ಇತಿಹಾಸದಲ್ಲಿ 1782-1799ರ ನಡುವಿನ ಅವಧಿಯು ವಿಶಿಷ್ಟವಾದದ್ದು. ಈ ಅವಧಿಯಲ್ಲಿ ಮೈಸೂರು ಸಾಮ್ರಾಜ್ಯ ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ಆತ ಏಕಾಂಗಿಯಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ತೀವ್ರವಾಗಿ ಹೋರಾಡಿ, ಅವರಿಗೆ ಸೋಲಿನ ರುಚಿಯನ್ನು ತೋರಿಸುವಲ್ಲೂ ಯಶಸ್ವಿಯಾಗಿದ್ದ. ಅದು ಕೂಡಾ ಒಂದು ಬಾರಿ ಅಲ್ಲ. ಎರಡು ಬಾರಿ. ಅದಾಗ್ಯೂ ನಾಲ್ಕನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಕೊನೆಯವರೆಗೂ ಹೋರಾಡಿ ರಣರಂಗದಲ್ಲೇ ವೀರಮರಣವನ್ನಪ್ಪಿದ.

ಮೈಸೂರು ಸಾಮ್ರಾಜ್ಯದ ಪ್ರಶ್ನಾತೀತ ರಾಜನಾಗಿ ಮೆರೆದ ಟಿಪ್ಪುವಿನ ಜೀವನ ಹಾಗೂ ಸಾಧನೆಯನ್ನು ಸಮಗ್ರವಾಗಿ ಕಟ್ಟಿಕೊಟ್ಟ ಗೌರವಾನ್ವಿತ ಚಿಂತಕ ಹಾಗೂ ದೇಶಾದ್ಯಂತ ಮನ್ನಣೆ ಹೊಂದಿರುವ ಇತಿಹಾಸಗಾರ ಡಾ.ಬಿ.ಶೇಕ್ ಅಲಿ ಅವರನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಆಕರ್ಷಕ ರೇಖಾಚಿತ್ರಗಳನ್ನೂ ಒಳಗೊಂಡಂತೆ ಈ ಪ್ರಬಂಧ ಕೃತಿಯನ್ನು ಯಶಸ್ವಿಯಾಗಿ ಹೊರತರುವಲ್ಲಿ ಮುತುವರ್ಜಿ ವಹಿಸಿದ ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯ ಕಾರ್ಯದರ್ಶಿ ಮತ್ತು ಕರ್ನಾಟಕ ಗಜೆಟಿಯರ್‌ನ ಪ್ರಧಾನ ಸಂಪಾದಕ ಬಸವರಾಜ್, ಐಎಎಸ್ ಹಾಗೂ ಶ್ರಮಿಸಿದ ಸಿಬ್ಬಂದಿಯನ್ನೂ ನಾನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ.

(ಗೋವಿಂದ ಎಂ.ಕಾರಜೋಳ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X