ನಾಡಬಾಂಬ್ ಬಳಸಿ ಬೇಟೆಗೆ ಯತ್ನ: ಇಬ್ಬರ ವಿರುದ್ಧ ಪ್ರಕರಣ
ಅಮಾಸೆಬೈಲು, ನ.9: ಅಮಾಸೆಬೈಲು ವಲಯದ ಮಡಾಮಕ್ಕಿ ಗ್ರಾಮದ ಮೀಸಲು ಅರಣ್ಯ ಪ್ರದೇಶದ ಹುಯ್ಯಾರಮಕ್ಕಿ ಎಂಬಲ್ಲಿ ನ.8ರಂದು ಸಂಜೆ ವೇಳೆ ನಾಡಬಾಂಬ್ ಹಿಡಿದು ಬೇಟೆಯಾಡಲು ಯತ್ನಿಸುತ್ತಿದ್ದ ಇಬ್ಬರ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯ ರಕ್ಷಕ ಮುಕ್ರಿ ಜಹೀರ್ ಅಬ್ಬಾಸ್, ಅರಣ್ಯ ವೀಕ್ಷಕ ಉದಯ ಕುಮಾರ್ ಮತ್ತು ರೋನಿ ಎಂಬವರು ಅರಣ್ಯ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಹುಯ್ಯಿರಮಕ್ಕಿಯ ಪ್ರಭಾಕರ ಶೆಟ್ಟಿ ಹಾಗೂ ಮಾರ್ಮಣ್ಣುವಿನ ಭರತ್ ಶೆಟ್ಟಿ ಎಂಬವರು ಸ್ಪೋಟಕ ವಸ್ತುಗಳಾದ ನಾಲ್ಕುನಾಡಬಾಂಬ್ಗಳನ್ನು ಹಿಡಿದುಕೊಂಡು ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದು, ಈ ವೇಳೆ ಅವರು ಅರಣ್ಯ ಸಿಬ್ಬಂದಿಯನ್ನು ನೋಡಿ ಸ್ಪೋಟಕ ವಸ್ತುಗಳನ್ನು ಅಲ್ಲೆ ಬಿಸಾಡಿ ಪರಾರಿಯಾಗಿದ್ದಾರೆ.
ಇವರು ಪ್ರಾಣಿಗಳನ್ನು ಕೊಂದು ಬೇಟೆಯಾಡುವ ಉದ್ದೇಶದಿಂದ ಸ್ಫೋಟಕ ವಸ್ತುಗಳನ್ನು ಇಟ್ಟು ಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





