ಜಿಯೋ ಸಿಮ್, 4 ಜಿ ಕನೆಕ್ಷನ್ , ರಹಸ್ಯ ಕ್ಯಾಮರಾ, 64 ಜಿಬಿ ಮೆಮೊರಿ ಕಾರ್ಡ್ .... 2000 ರೂ . ನೋಟಿನಲ್ಲಿವೆ !!
ನಗೆಪಾಟಲಿಗೀಡಾದ ಝೀ ನ್ಯೂಸ್ ' ವರದಿ'

ಹೊಸದಿಲ್ಲಿ, ನ. 9 : 500 ಹಾಗು 1000 ರೂ ನೋಟುಗಳನ್ನು ಹಠಾತ್ತನೆ ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋದಿ, ಬಿಜೆಪಿ ಅಭಿಮಾನಿಗಳು ಇದು ಐತಿಹಾಸಿಕ ಕ್ರಮವೆಂದು ಬಣ್ಣಿಸಿದರೆ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಸಿಪಿಎಂ ಮತ್ತಿತರ ಕೆಲವು ಪಕ್ಷಗಳು ಹಾಗು ತಜ್ಞರು ಇದನ್ನು ವಿರೋಧಿಸಿದ್ದಾರೆ. ಇನ್ನು ಕೆಲವು ಮೋದಿ ವಿರೋಧಿಗಳೂ ಇದು ಸದ್ಯ ತೊಂದರೆ ತಂದರೂ ಮುಂದಿನ ದಿನಗಳಲ್ಲಿ ದೇಶಕ್ಕೆ ಇದರಿಂದ ಒಳಿತಾಗಲಿದೆ ಎಂದು ಹೇಳಿದ್ದಾರೆ.
ಆದರೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಭಾಷ್ ಚಂದ್ರ ಅವರ ಮಾಲಕತ್ವದ ಝೀ ನ್ಯೂಸ್ ಮಾತ್ರ ಈ ನಿರ್ಧಾರದಿಂದ ಎಷ್ಟು ರೋಮಾಂಚನಗೊಂಡಿತೆಂದರೆ ಬರಲಿರುವ 2000 ರೂ ಮುಖಬೆಲೆಯ ನೊಸ ನೋಟುಗಳ ಬಗ್ಗೆ ವಿಶೇಷ ವರದಿಯನ್ನೇ ಪ್ರಕಟಿಸಿತು.
" ಈ ಹೊಸ 2000 ರೂ . ನೋಟಿನಲ್ಲಿ ರಹಸ್ಯ ಚಿಪ್ ವೊಂದು ಇರಲಿದ್ದು ಇದರಿಂದ ನೋಟು ಎಲ್ಲಿದೆ ಎಂದು ಕೇಂದ್ರ ಸರಕಾರ ಕಂಡು ಹಿಡಿಯಲು ಸಾಧ್ಯವಿದೆ. ಎಲ್ಲಿವರೆಗೆ ಅಂದರೆ ಭೂಮಿಯಿಂದ 120 ಮೀಟರ್ ಅಡಿಯಲ್ಲಿದ್ದಾರೂ ಈ ಚಿಪ್ ಮೂಲಕ ಟ್ರ್ಯಾಕ್ ಮಾಡಬಹುದು " ಎಂದು ಝೀ ನ್ಯೂಸ್ ವರದಿ ಮಾಡಿಬಿಟ್ಟಿತು ( ಸ್ಕ್ರೀನ್ ಶಾಟ್ ಇಲ್ಲಿದೆ ) !

ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡಿ ಭಾರೀ ಚರ್ಚೆಗೆ ಕಾರಣವಾಯಿತು.
ಆದರೆ ಒಂದು ಸಮಸ್ಯೆ ಇತ್ತು . ಅದೇನೆಂದರೆ ಝೀ ನ್ಯೂಸ್ ಪ್ರಕಟಿಸಿದ ಈ ವರದಿ ಸುಳ್ಳಾಗಿತ್ತು. ಹಸಿ ಸುಳ್ಳು ! ರಿಸರ್ವ್ ಬ್ಯಾಂಕ್ ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಿ ಇದು ಸುಳ್ಳು, ಕಪೋಲಕಲ್ಪಿತ ಎಂದು ಹೇಳಿತು. ಅಲ್ಲಿಗೆ ಝೀ ನ್ಯೂಸ್ ' ಚಿಪ್ ಸುದ್ದಿ' ಎಲ್ಲರ ನಗೆಪಾಟಲಿಗೀಯದಾಯಿತು .
ಸಾಮಾಜಿಕ ಜಾಲತಾಣಗಳಲ್ಲಿ ಇದನ್ನೆತ್ತಿಕೊಂಡವರು ಬಗೆ ಬಗೆಯಲ್ಲಿ ಈ ಸುಳ್ಳು ಸುದ್ದಿಯನ್ನು ತಮಾಷೆ ಮಾಡಿದರು . ಇಲ್ಲಿವೆ ಕೆಲವು ಸ್ಯಾಂಪಲ್ ಗಳು :
I heard the new Rs.2000 notes have an inbuilt mechanism whereby if you do something bad, they give you a mild shock.
— Karthik (@beastoftraal) November 9, 2016
Apart from Nano GPS Chip, the Rs 2000 Notes will also have Jio Sim with 4G connection. It will call RBI and inform where it is stocked
— Joy (@Joydas) November 8, 2016







