ಕವಿತಾ ಟ್ರಸ್ಟಿನ ವಾಚನ ಸ್ಪರ್ಧೆಯ ವಿಜೇತರು

ಮಂಗಳೂರು, ನ.9: ಕೊಂಕಣಿ ಕವಿತೆಯು ಸಮಗ್ರ ಏಳಿಗೆಗೆ ದುಡಿಯುವ ಕವಿತಾ ಟ್ರಸ್ಟ್ ಏರ್ಪಡಿಸಿದ ಕೊಂಕಣಿ ಕವಿತಾ ವಾಚನ ಸ್ಪರ್ಧೆಯ ಅಂತಿಮ ಹಂತವು ಇದೇ ರವಿವಾರ ನವೆಂಬರ 6ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು.
ಮಕ್ಕಳ ವಿಭಾಗದಲ್ಲಿ ಮಂಗಳೂರು ಬಿಜೈನ ಓಸ್ಟಿನ್ ಡಿಕುನ್ಹ ಹಾಗೂ ಯುವಜನರ ವಿಭಾಗದಲ್ಲಿ ಗೋವಾದ ಸುಪ್ರಿಯಾ ಕಾಣಕೋಣಕಾರ ವಿಜೇತರಾಗಿದ್ದಾರೆ.
ಕನ್ನಡ ಲೇಖಕ ಹಾಗೂ ವಿಮರ್ಶಕ ನರೇಂದ್ರ ಪೈ, ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ ಶೆಣೈ ಹಾಗೂ ರೋಹನ್ ಕಾರ್ಪೊರೇಶನ್‌ನ ರೋಹನ್ ಮೊಂತೇರೊ ಉಪಸ್ಥಿತರಿದ್ದರು. ಕವಿಗಳಾದ ಶಕುಂತಲಾ ಕಿಣಿ, ಟೈಟಸ್ ನೊರೊನ್ಹಾ, ಸ್ಮಿತಾ ಶೆಣೈ, ಗುರು ಬಾಳಿಗಾ ಹಾಗೂ ಎಡ್ಡಿ ಸಿಕ್ವೇರಾ ಸ್ಪರ್ಧೆಯ ಪರಿಶೀಲಕರಾಗಿದ್ದರು. ಆಂಡ್ರ್ಯೂ ಡಿಕುನ್ಹಾ ಸ್ಪರ್ಧೆಯನ್ನು ನೆರವೇರಿಸಿದರು.
ಕವಿತಾ ಟ್ರಸ್ಟ್ ಅಧ್ಯಕ್ಷ ಮೆಲ್ವಿನ್ ರೊಡ್ರಿಗಸ್ ಸ್ವಾಗತಿಸಿದರು. ಎವ್ರೆಲ್ ರೊಡ್ರಿಗಸ್ ಕಾರ್ಯಕ್ರಮ ನಿರೂಸಿದರು. ಲಿಯಮ್ ಪಾಯ್ಸಿ ವಂದಿಸಿದರು. ನೆಲ್ಸನ್ ಮತ್ತು ಲವೀನಾ ರೊಡ್ರಿಕ್ಸ್ ಮೂರನೆ ಚಾಫ್ರಾ ದೆಕೊಸ್ತಾ ಸ್ಮಾರಕ ಕೊಂಕಣಿ ವಾಚನ ಸ್ಪರ್ಧೆಯ ವಿಜೇತರು-ಓಸ್ಟಿನ್ ಡಿಕುನ್ಹಾ ಬಿಜೈ, ವೆನ್ಸಿಟಾ ಡಾಯಸ್ ನಾಗುರಿ, ಯೊನ್ ಪ್ರೆಸ್ಟನ್ ಲೋಬೊ ಬಂಟವಾಳ.
ಪ್ರೋತ್ಸಾಹಕ ಬಹುಮಾನಗಳು-ಆಲ್ಕಾ ಪವಿತ್ರಾ ಲುವಿಸ್ ಬ್ರಹ್ಮಾವರ, ಎಲ್ಡೊನ್ ನೊಯ್ ಡಿಸೋಜಾ ಬಜ್ಪೆ ಮತ್ತು ರೇವೊನ್ ಡಾಯಸ್ ಉಡುಪಿ. ರೋಹನ ಮತ್ತು ಲವೀಟಾ ಮೊಂತೇರೊ, ಆರನೆ ಅಖಿಲ ಭಾರತ ಕೊಂಕಣಿ ಕಥಾ ವಾಚನ ಸ್ಪರ್ಧೆ ವಿಜೇತರು- ಸುಪ್ರಿಯಾ ಕಾಣಕೋಣಕಾರ, ಎಮ್ಲಿನ ಡಿಸೋಜಾ ನಾಗುರಿ, ಸುಶ್ಮಿತಾ ಪೈ ಕಾಣೆ ಮಡಗಾಂವ್.
ಪ್ರೋತ್ಸಾಹಕ ಬಹುಮಾನಗಳು -ದತ್ತರಾಜ ನಾಯ್ಕಾ, ರೋಹನ್ ಡಿಸೋಜ, ಫೆವಿಶಾ ಫೆರ್ನಾಂಡಿಸ್, ಪ್ರಾದ್ನಾತಾರಿ ಮತ್ತು ಸುನೇತ್ರ ಕಾಮತ್.
ಚಾರ್ಲ್ಸ್ ಮತ್ತು ತೆರೆಝಾ ರೊಡ್ರಿಗಸ್ ಸ್ಮಾರಕ ಕೊಂಕಣಿ ಕವಿತೆ ಬರೆಯುವ ಸ್ಪರ್ಧಾ ವಿಜೇತರು- ಎಂಡ್ರಿಯಾ ಮಿನೇಜಸ್, ಡೋನಾ ಪಾವ್ಲಾ, ಸಾನಿಕಾ ಪವಾರ್ ಗೋವಾ, ಖ್ಯಾತಿ ನಾಯಕ್ ಮಂಗಳೂರು, ರಾಹಿ ಗಾಂವಕಾರ್ ಗೋವಾ, ಸಾವರಿ ಫಳ ದೇಸಾಯಿ, ಗೋವಾ.







