ಆತುರದ ನಿರ್ಧಾರ: ಮಮತಾ

ನೋಟುಗಳ ಅಮಾನ್ಯ ಕ್ರಮ ಕೇಂದ್ರ ಸರಕಾರದ ಆತುರದ ನಿರ್ಧಾರ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ದೇಶದಲ್ಲಿ ಗೊಂದಲ ಮತ್ತು ಅವ್ಯವಸ್ಥೆಯ ಪರಿಸ್ಥಿತಿ ಇದ್ದು ಕೇಂದ್ರ ಸರಕಾರ ತಕ್ಷಣ ಈ ನಿರ್ಧಾರವನ್ನು ವಾಪಸು ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜನರನ್ನು ವಿಪತ್ತಿನಿಂದ ರಕ್ಷಿಸಬೇಕಾಗಿದೆ.
ರಸ್ತೆಗಳು ಮುಚ್ಚಲ್ಪಟ್ಟಿವೆ, ಮಾರುಕಟ್ಟೆಗಳು ಬಂದ್ ಆಗಿವೆ. ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲೂ ಆಗುತ್ತಿಲ್ಲ. ಜನ ಕಂಗಾಲಾಗಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಮಂದಿ ಅಳುತ್ತಿದ್ದಾರೆ. ಅಘೋಷಿತ ಬಂದ್‌ನಂತಾಗಿದೆ ದೇಶದ ಪರಿಸ್ಥಿತಿ. ಕಪ್ಪು ಹಣ ಹೊಂದಿರುವವರಿಗೆ ಏನೂ ತೊಂದರೆಯಾಗದು ಎಂದರು. ಸರಿಯಾದ ಕ್ರಿಯಾಯೋಜನೆ ಇಲ್ಲದೆ ಕಾರ್ಯಕ್ರಮವೊಂದನ್ನು ಅನುಷ್ಠಾನಗೊಳಿಸಿದರೆ ಏನಾಗುತ್ತದೆ ಎಂಬುದಕ್ಕೆ ಕೇಂದ್ರ ಸರಕಾರದ ಈ ಕ್ರಮ ಉತ್ತಮ ಉದಾಹರಣೆಯಾಗಿದೆ ಎಂದು ಮಮತಾ ಟೀಕಿಸಿದರು.
Next Story





