ಡಿ.4ರಂದು ಮಂಗಳೂರು ಎಪಿಎಂಸಿಗೆ ಚುನಾವಣೆ
ಮಂಗಳೂರು, ನ.9: ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗೆ ಚುನಾವಣೆ ನಡೆಸಲು ದ.ಕ. ಜಿಲ್ಲಾಧಿಕಾರಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ನವೆಂಬರ್ 14ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ನ.15ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂದೆಗೆೆದುಕೊಳ್ಳಲು ನ.18 ಕಡೆಯ ದಿನಾಂಕ. ಚುನಾವಣೆೆಯು ಡಿಸೆಂಬರ್ 4ರಂದು ನಡೆಯಲಿದ್ದು, ಡಿ.6ರಂದು ಮತ ಎಣಿಕೆ ನಡೆಯಲಿದೆ. ಮಂಗಳೂರು ಎಪಿಎಂಸಿಯ 14 ಕ್ಷೇತ್ರಗಳಲ್ಲಿ ಒಟ್ಟು 31,151 ಮತದಾರರಿದ್ದು, ನಾಮಪತ್ರಗಳನ್ನು ಸಲ್ಲಿಸಬಯಸುವವರು ಮಂಗಳೂರು ತಾಲೂಕು ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಮಂಗಳೂರು ಉಪವಿಭಾಗಾಧಿಕಾರಿ ಎ.ಸಿ. ರೇಣುಕಾ ಪ್ರಸಾದ್ ತಿಳಿಸಿದ್ದಾರೆ.
Next Story





