ಇಂದಿನ ಕಾರ್ಯಕ್ರಮಗಳು
ಟಿಪ್ಪು ಜಯಂತಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಮೈಸೂರು ಹುಲಿ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ. ಸಮಯ: ಬೆಳಗ್ಗೆ 10ಗಂಟೆೆ. ಸ್ಥಳ: ಲಯನ್ಸ್ ಭವನ, ಬ್ರಹ್ಮಗಿರಿ ಉಡುಪಿ.
ಗಾನ-ಯಾನ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕ ಏಕೀಕರಣದ 60 ವರ್ಷಾಚರಣೆ ಅಂಗವಾಗಿ ಕನ್ನಡನಾಡು, ನುಡಿ, ಇತಿಹಾಸ, ಕಲೆ ಮತ್ತು ಸಾಹಿತ್ಯ ಶ್ರೀಮಂತಿಕೆಯ ಕುರಿತು ಬೆಂಗಳೂರಿನ ಸರಸ್ ಕಮ್ಯೂನಿಕೇಷನ್ ತಂಡದ ಗಾಯಕರಾದ ಸುನೀತಾ, ಮಂಗಳಾ ರವಿ, ಮೋಹನ್ ಹಾಗೂ ನಿತಿನ್ ರಾಜಾರಾಮ ಶಾಸ್ತ್ರಿ ಇವರಿಂದ ಕನ್ನಡ ಚಿತ್ರಗೀತೆಗಳ ‘ಗಾನ-ಯಾನ’ ಕಾರ್ಯಕ್ರಮ. ಸಮಯ: ಸಂಜೆ 6ಗಂಟೆಗೆ. ಸ್ಥಳ: ಮಲ್ಪೆಸಮುದ್ರ ಕಿನಾರೆ, ಮಲ್ಪೆ. ಸ್ತಬ್ಧಚಿತ್ರಗಳ ಮೆರವಣಿಗೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಗಳ ವತಿಯಿಂದ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ. ಸಮಯ: ಸಂಜೆ 4ಗಂಟೆಗೆ. ಸ್ಥಳ: ಉಡುಪಿಯ ಜೋಡುಕಟ್ಟೆ ಯಿಂದ ಬೋರ್ಡ್ ಹೈಸ್ಕೂಲ್‌ವರೆಗೆ, ಉಡುಪಿ. ಪೇಜಾವರ ಶ್ರೀಗಳ ಪಂಚಮ ಪರ್ಯಾಯದಲ್ಲಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನ ಕಾರ್ಯಕ್ರಮಗಳು. ಅಪರಾಹ್ನ 3ಗಂಟೆಗೆ ಕಾಂಚನ ಸಹೋದರಿಯರಿಂದ (ಶೃತಿ ರಂಜಿನಿ, ಶ್ರೀರಂಜಿನಿ) ನಾಮಸಂಕೀರ್ತನೆ, ಸಂಜೆ 5ಗಂಟೆಗೆ ಚಂದ್ರಶಾಲೆ ಪುರಾಣ ವಿದ್ವಾನ್ ಉಡುಪಿ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5ಗಂಟೆಗೆ ಶ್ರೀವಿಜಯದಾಸರ ಆರಾಧನೆ ಪ್ರಯುಕ್ತ ಶೋಭಾಯಾತ್ರೆ, 6ಗಂಟೆಗೆ ರಾಜಾಂಗಣದಲ್ಲಿ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ, 7ಗಂಟೆಗೆ ಶ್ರುತಿ ವಿಶ್ವನಾಥ್ ಮತ್ತು ಬಳಗದಿಂದ ನಾಮಸಂಕೀರ್ತನೆ, ರಾತ್ರಿ 9ಗಂಟೆಗೆ ನೃತ್ಯ ಬ್ಯಾಲೆಯಲ್ಲಿ ಶ್ರೀರಾಮಾನುಜನ್‌ಗೆ ಶ್ರದ್ಧಾಂಜಲಿ ಬೀಬಿ ನಾಚಿಯಾರ್, ಮಿಥುನ್ ಶ್ಯಾಮ್ ಮತ್ತು ಬಳಗದಿಂದ.
<ಅಹವಾಲು ಸಭೆ: ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್)ನ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ವಿಸ್ತರಣೆಗಾಗಿ ಸಾರ್ವಜನಿಕರಿಂದ ಅಹವಾಲು ಆಲಿಕೆ ಸಭೆ. ಸಮಯ: ಬೆಳಗ್ಗೆ 10:30ರಿಂದ. ಸ್ಥಳ: ಕುಂಜೂರು ದುರ್ಗಾದೇವಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ, ಎಲ್ಲೂರು ಪಡುಬಿದ್ರಿ.





