ನಟರಿಬ್ಬರ ಶೋಧಕಾರ್ಯ ವೀಕ್ಷಿಸಲು ಹೋದಾತ ನಾಪತ್ತೆ

ಬೆಂಗಳೂರು, ನ.10: ‘ಮಾಸ್ತಿಗುಡಿ’ ಚಿತ್ರದ ಸಾಹಸ ದ್ಯಶ್ಯದ ವೇಳೆ ಹೆಲಿಪಾಕ್ಟರ್‌ನಿಂದ ತಿಪ್ಪಗೊಂಡನಹಳ್ಳಿಯ ಸರೋವರಕ್ಕೆ ಹಾರಿ ಸಾವನ್ನಪ್ಪಿರುವ ನಟರಾದ ಉದಯ್ ಹಾಗೂ ಅನಿಲ್ ಮೃತದೇಹ ಶೋಧ ಕಾರ್ಯಾಚರಣೆ ವೀಕ್ಷಿಸಲು ಹೋಗಿದ್ದ ಗ್ರಾಮಸ್ಥನೊಬ್ಬ ಸರೋವರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಪತ್ತೆಯಾದವನನ್ನು ಕೂಲಿ ಕಾರ್ಮಿಕ ಯಲ್ಲಯ್ಯ ಎಂದು ಗುರುತಿಸಲಾಗಿದ್ದು, 4 ಬೋಟ್‌ಗಳ ಮೂಲಕ ತಿಪ್ಪಗೊಂಡನಹಳ್ಳಿಯಲ್ಲಿ ಯಲ್ಲಯ್ಯರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.
ನ.8 ರಂದು ಮಧ್ಯಾಹ್ನ 12:00 ಗಂಟೆಗೆ ನಟರಾದ ಉದಯ್ ಹಾಗೂ ಅನಿಲ್ ಶೋಧ ಕಾರ್ಯ ವೀಕ್ಷಿಸಲು ತಿಪ್ಪಗೊಂಡನಹಳ್ಳಿಗೆ ಯಲ್ಲಯ್ಯ ತೆರಳಿದ್ದರು. ಆಗ ಹೆಜ್ಜೇನು ದಾಳಿ ನಡೆಸಿದಾಗ ಯಲ್ಲಯ್ಯ ಸಹಿತ ಮೂವರು ಸರೋವರಕ್ಕೆ ಜಿಗಿದಿದ್ದರು. ಆ ಬಳಿಕ ಯಲ್ಲಯ್ಯ ತಮ್ಮ ಮನೆಗೆ ವಾಪಸಾಗದೇ ಇರುವ ಹಿನ್ನೆಲೆಯಲ್ಲಿ ಇದೀಗ ಅವರಿಗಾಗಿ ಶೋಧ ಕಾರ್ಯವನ್ನು ಆರಂಭಿಸಲಾಗಿದೆ.
Next Story





