ಗುಜರಾತ್‌ನ ಜೈಲುಗಳಲ್ಲಿರುವ ಮಕ್ಕಳನ್ನು ಕೇರಳ ಜೈಲಿಗೆ ಕರೆತರಲು ಸರಕಾರಕ್ಕೆ ಆಗ್ರಹ

ತಿರುವನಂತಪುರಂ,ನ. 10: ಗುಜರಾತ್ ಜೈಲಿನಲ್ಲಿ ಇರುವ ತಮ್ಮ ಮಕ್ಕಳನ್ನು ಕೇರಳದ ಜೈಲಿಗೆ ಕರೆತರಲು ರಾಜ್ಯಸರಕಾರ ಪ್ರಯತ್ನಿಸಬೇಕೆಂದು ಸಿಮಿ ಕಾರ್ಯಕರ್ತರೆಂದು ಆರೋಪಿಸಿ 2008ರಲ್ಲಿ ಬಂಧಿಸಿ ಗುಜರಾತ್‌ನ ಜೈಲಿನಲ್ಲಿರಿಸಲಾಗಿರುವ ಶಿಬ್ಲಿ ಮತ್ತು ಶಾದುಲಿಯ ಎಂಬಿಬ್ಬರ ತಂದೆ ಪಿಎಸ್ ಅಬ್ದುಲ್ ಕರೀಂ, ಮತ್ತು ಅಬ್ದುಲ್ ಸತ್ತಾರ್ ಅನ್ಸಾರ ನದ್ವಿ ಎಂಬವರ ತಂದೆ ಅಬ್ದುಲ್ ರಝಾಕ್ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆಂದು ವರದಿಯಾಗಿದೆ.
ಭೋಪಾಲ್ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ಎಂಟು ಮಂದಿ ಮುಸ್ಲಿಮ್ ಯುವಕರನ್ನು ಪೊಲೀಸರು ಎನ್‌ಕೌಂಟರ್ ನಡೆಸಿ ಕೊಂದಿರುವುದು ನಮ್ಮಲ್ಲಿ ಭೀತಿ ಸೃಷ್ಟಿಸಿದೆ. 2008 ಮಾರ್ಚ್ 26ಕ್ಕೆ ತಮ್ಮ ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ 2008 ಜುಲೈಯಲ್ಲಿ ನಡೆದಿದ್ದ ಸ್ಫೋಟದಲ್ಲಿ ಇವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇವರಿನ್ನೀಗ ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ಕೇರಳಗಳಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಎಂಟು ವರ್ಷಗಳಿಂದ ವಿಚಾರಣೆ ಪೂರ್ತಿಯಾಗದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಕೇರಳದಲ್ಲಿ ಕೇಸು ಇರುವುದರಿಂದ ಗುಜರಾತ್‌ನಿಂದ ರಾಜ್ಯದ ಜೈಲುಗಳಿಗೆ ಕರೆತರಬೇಕು. ತಮ್ಮಮಕ್ಕಳು ಸೂರ್ಯ ನ ಬೆಳಕು ನೋಡಲಿಕ್ಕಾಗಿ ಅನ್ಯ ಸತ್ಯಾಗ್ರಹವನ್ನು ಕೂಡಾ ಮಾಡಬೇಕಾಯಿತು ಎಂದು ಇವರ ಹೆತ್ತವರು ಹೇಳಿದ್ದಾರೆ. ಇವರನ್ನು ಕೇರಳದ ಜೈಲಿಗೆ ಕರೆತರಬೇಕೆಂದು ಮಾನವಹಕ್ಕುಗಳ ಸಂಘಟನೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಡಾ.ಜೆ. ದೇವಿಕ ಹೇಳಿದ್ದಾರೆ. ಭೋಪಾಲ್ ಜೈಲಿನಲ್ಲಿದ್ದವರ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ವಿಫಲವಾಗುತ್ತದೆ ಎಂದು ಅರಿವಾದ್ದರಿಂದ ಕೊಂದು ಹಾಕಲಾಗಿದೆ. ಕಳೆದ ವರ್ಷ ತೆಲಂಗಾಣದ ಅಲೆರ್‌ನಲ್ಲಿ ಕೂಡಾ ಐದು ಮಂದಿಯುವಕರನ್ನು ಈರೀತಿ ಕೊಲ್ಲಲಾಗಿತ್ತು ಎಂದು ದೇವಿಕಾ ಹೇಳಿದ್ದಾರೆಂದು ವರದಿ ತಿಳಿಸಿದೆ.





